ನ್ಯೂಸ್ ನಾಟೌಟ್: ಕರಾಚಿಯ ಮಾಲಿರ್ ಜೈಲಿನಲ್ಲಿ ಮಂಗಳವಾರ(ಮಾ.25) ಭಾರತೀಯ ಮೀನುಗಾರ ಗೌರವ್ ರಾಮ್ ಆನಂದ್(52) ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಕ್ರಮವಾಗಿ ಪಾಕಿಸ್ತಾನದ ಜಲಗಡಿ ಪ್ರವೇಶಿಸಿದ ಆರೋಪದ ಮೇಲೆ ಫೆಬ್ರವರಿ 2022 ರಲ್ಲಿ ಬಂಧಿಸಲ್ಪಟ್ಟ ಆನಂದ್ ಎಂಬ ಭಾರತೀಯ ವ್ಯಕ್ತಿ ಪಾಕ್ ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮಾಲಿರ್ ಜೈಲಿನ ಸೂಪರಿಂಟೆಂಡೆಂಟ್ ಅರ್ಷದ್ ಹುಸೇನ್ ಈ ಘಟನೆಯನ್ನು ದೃಢಪಡಿಸಿದ್ದು, ಕೈದಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಜೈಲಿನ ಕರ್ತವ್ಯ ನಿರತ ವೈದ್ಯರು ಬೆಳಗಿನ ಜಾವ 2:20 ಕ್ಕೆ ಆನಂದ್ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮ್ಯಾಜಿಸ್ಟ್ರೇಟ್, ಮುಂದಿನ ಕಾನೂನು ಕ್ರಮಗಳು ಮುಗಿಯುವವರೆಗೆ ಅವರ ದೇಹವನ್ನು ಸೊಹ್ರಾಬ್ ಗೋತ್‌ನಲ್ಲಿರುವ ಈಧಿ ಫೌಂಡೇಶನ್‌ನ ಕೋಲ್ಡ್ ಸ್ಟೋರೇಜ್ ಸ್ಥಳಾಂತರಿಸಲು ಆದೇಶಿಸಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 31, 2024 ರ ಹೊತ್ತಿಗೆ, 144 ಭಾರತೀಯ ಮೀನುಗಾರರು ಮತ್ತು 1,173 ದೋಣಿಗಳು ಪಾಕಿಸ್ತಾನದ ವಶದಲ್ಲಿದ್ದಾರೆ.
ನಾಡದೇವಿ ಚಾಮುಂಡೇಶ್ವರಿ ಬಗೆಗಿನ ಹೇಳಿಕೆ ವಿವಾದಕ್ಕೆ ತೆರೆ..! ಕ್ಷಮೆ ಕೇಳಿದ ರಕ್ಷಕ್ ಬುಲೆಟ್