ನ್ಯೂಸ್ ನಾಟೌಟ್: `ಆಪರೇಷನ್ ಸಿಂಧೂರ’ ವೇಳೆ ಪಾಕಿಸ್ತಾನದ ಮೇಲೆ ಭಾರತ ಬ್ರಹ್ಮೋಸ್ ದಾಳಿ ಮಾಡಿದೆ. ಆದರೆ, ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್ (Masood Akthar) ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಾರತ ನಡೆಸಿದ `ಆಪರೇಷನ್ ಸಿಂಧೂರದ ಅಡಿಯಲ್ಲಿ ಪಾಕ್ ನ 9 ಉಗ್ರರ ನೆಲೆಗೆಳು ಸೇರಿದಂತೆ ಕರಾಚಿ ಬಳಿಯಿರುವ ಭೋಲಾರಿಯ ವಾಯುನೆಲೆ ಮೇಲೆ ಬ್ರಹ್ಮೋಸ್ ಕ್ಷಿಪಣಿ ದಾಳಿಯಾಗಿದೆ. ಮೊದಲು ಇದೇ ಜಾಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಆದರೆ, ಬಳಿಕ ಪಾಕ್ ನ ವಾಯುನೆಲೆಯ ಹ್ಯಾಂಗರ್ ಗೂ ಹಾನಿಯಾಗಿದೆ. ಜೊತೆಗೆ ವಾಯುಪಡೆ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯ ವಿಮಾನವು ಕೂಡ ಇದೇ ಸಮಯದಲ್ಲಿ ಪತನಗೊಂಡಿದೆ ಎಂದು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದ ವಾಯುನೆಲೆಗಳ ಪೈಕಿ ಭೋಲಾರಿಯು ಒಂದು. ಇದು ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಿಂದ 270 ಕಿ.ಮೀ ದೂರದಲ್ಲಿದೆ. ಭಾರತದ ಪಡೆಗಳು ಒಂದರ ನಂತರ ಒಂದರಂತೆ ನಾಲ್ಕು ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸಿವೆ. ದಾಳಿಯ ವೇಳೆ ಒಂದು ಕ್ಷಿಪಣಿ ಭೋಲಾರಿ ವಾಯುನೆಲೆಯ ಹ್ಯಾಂಗರ್ ಗೆ ಡಿಕ್ಕಿ ಹೊಡೆದಿದ್ದು, ಸಾವು-ನೋವುಗಳು ಕೂಡ ವರದಿಯಾಗಿವೆ. ಪಾಕಿಸ್ತಾನದ ಮೂರು ವಾಯುನೆಲೆಗಳಾದ ಉತ್ತರ ವಾಯು ಕಮಾಂಡ್, ಕೇಂದ್ರ ವಾಯುನೆಲೆ ಮತ್ತು ದಕ್ಷಿಣ ವಾಯುನೆಲೆಗಳ ಅಡಿಯಲ್ಲಿರುವ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ. ಅಲ್ಲದೆ ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಸ್ಯಾಟ್ ಲೈಟ್ ಚಿತ್ರಗಳಲ್ಲಿ ದಾಳಿಯಾಗಿರುವುದು ಸಾಬೀತಾಗಿದ್ದು, ಹಾನಿಯ ದೃಶ್ಯಗಳನ್ನು ತೋರಿಸಿದೆ. ಆದರೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
PIB ಮಾಹಿತಿ ಪ್ರಕಾರ, ಈ ದಾಳಿಯಿಂದಾಗಿ ಸ್ಕ್ವಾಡ್ರನ್ ಲೀಡರ್ ಉಸ್ಮಾನ್ ಯೂಸುಫ್ ಮತ್ತು ನಾಲ್ವರು ವಾಯುಪಡೆ ಸಿಬ್ಬಂದಿ ಸೇರಿದಂತೆ 50 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಪಾಕಿಸ್ತಾನಿ ವಿಮಾನಗಳು ನಾಶವಾಗಿವೆ. ಅದಲ್ಲದೇ ಪಾಕ್ ವಾಯುಪಡೆಯ ಮೂಲಸೌಕರ್ಯದ ಸುಮಾರು ಶೇಕಡ 20ರಷ್ಟು ನಾಶವಾಗಿದೆ ಎಂದು ವರದಿಯಾಗಿದೆ.
ಅಶ್ಲೀಲ ವಿಡಿಯೋ ಪ್ರಕರಣ: ಮುಖಂಡನನ್ನು ಪಕ್ಷದಿಂದ ವಜಾಗೊಳಿಸಿದ ಬಿಜೆಪಿ..! ಇಲ್ಲಿದೆ ಸಂಪೂರ್ಣ ಮಾಹಿತಿ
ಲೈವ್ ನಲ್ಲಿರುವಾಗಲೇ ಯುವತಿಯನ್ನು ಗುಂಡಿಕ್ಕಿ ಹತ್ಯೆ..! ವಿಡಿಯೋ ವೈರಲ್