Latestದೇಶ-ವಿದೇಶ

ಭಾರತದಲ್ಲಿ 10 ಮಿಲಿಯನ್ ಡಾಲರ್ ಗೂ ಅಧಿಕ ಆಸ್ತಿ ಹೊಂದಿರುವವರ ಸಂಖ್ಯೆ 85,698ಕ್ಕೆ ಏರಿಕೆ..! 2019ರಲ್ಲಿ ಕೇವಲ ಏಳು ಜನ, ಈಗ 191 ಮಂದಿ ಬಿಲಿಯನೇರ್ ಗಳು..!

778
Spread the love

ನ್ಯೂಸ್ ನಾಟೌಟ್: ಭಾರತದಲ್ಲಿ 10 ಮಿಲಿಯನ್ ಡಾಲರ್ ಗೂ ಅಧಿಕ ಆಸ್ತಿ ಹೊಂದಿರುವವರ ಸಂಖ್ಯೆ 85,698ಕ್ಕೆ ಏರಿಕೆಯಾಗಿದೆ. ಜಾಗತಿಕ ರಿಯಲ್ ಎಸ್ಟೇಜ್ ಏಜೆನ್ಸಿ ನೈಟ್ ಫ್ರಾಂಕ್( Knight Frank)ಬುಧವಾರ ‘ ‘ದಿ ವೆಲ್ತ್ ರಿಪೋರ್ಟ್ 2025’ ಬಿಡುಗಡೆ ಮಾಡಿದೆ.

ಈ ವರದಿ ಪ್ರಕಾರ ಹಿಂದಿನ ವರ್ಷದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚಿನ ಆಸ್ತಿ ಹೊಂದಿರುವವರ ಸಂಖ್ಯೆ(HNWI) 80,686 ಇತ್ತು. ಆದರೆ ಈ ಬಾರಿ ಇದು 85,698ಕ್ಕೆ ಅಂದರೆ ಶೇ.6ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿದ್ದು, 2028 ರ ವೇಳೆಗೆ ಈ ಸಂಖ್ಯೆ 93,753 ಕ್ಕೆ ಏರುವ ನಿರೀಕ್ಷೆಯಿದೆ ಎಂದು ಏಜೆನ್ಸಿ ಮಾಹಿತಿ ನೀಡಿದೆ.

ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಳವು ದೇಶದ ಬಲವಾದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಹೂಡಿಕೆ ಅವಕಾಶಗಳು ಮತ್ತು ಐಷಾರಾಮಿ ಮಾರುಕಟ್ಟೆ ವಿಸ್ತರಣೆಗೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಅಲ್ಲದೇ ಜಾಗತಿಕ ಸಂಪತ್ತು ಸೃಷ್ಟಿಯಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವನ್ನಾಗಿಸುತ್ತದೆ.
ಭಾರತದಲ್ಲಿ ಬಿಲಿಯನೇರ್ ಜನರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಬಂದಿದೆ. ಪ್ರಸ್ತುತ ಭಾರತದಲ್ಲಿ 191 ಶತಕೋಟ್ಯಾಧಿಪತಿಗಳಿದ್ದಾರೆ. ಅದರಲ್ಲಿ 26 ಮಂದಿ ಕಳೆದ ವರ್ಷವಷ್ಟೇ ಶ್ರೇಯಾಂಕದ ಪಟ್ಟಿ ಸೇರಿದ್ದಾರೆ. 2019ರಲ್ಲಿ ಕೇವಲ ಏಳು ಜನರು ಮಾತ್ರ ಈ ಪಟ್ಟಿಗೆ ಸೇರಿದ್ದರು.

ಭಾರತೀಯ ಬಿಲಿಯನೇರ್‌ಗಳ ಒಟ್ಟು ಸಂಪತ್ತು 950 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಜಾಗತಿಕವಾಗಿ ಶ್ರೀಮಂತರ ಪಟ್ಟಿಯಲ್ಲಿ ದೇಶವು ಮೂರನೇ ಸ್ಥಾನದಲ್ಲಿದೆ. ಅಮೆರಿಕ 5.7 ಟ್ರಿಲಿಯನ್ ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಚೀನಾ 1.34 ಟ್ರಿಲಿಯನ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ.

See also  ಟೇಕಾಫ್ ಆಗುವಾಗ ವಿಮಾನದಿಂದ ಕೆಳಗೆ ಬಿದ್ದ ಗಗನಸಖಿ..! ಆಸ್ಪತ್ರೆಗೆ ದಾಖಲು
  Ad Widget   Ad Widget   Ad Widget   Ad Widget