Latestದೇಶ-ವಿದೇಶವೈರಲ್ ನ್ಯೂಸ್

ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಕಿಡ್ನ್ಯಾಪ್‌ ಗೆ ಸಹಕರಿಸಿದ್ದ ಪಾಕ್‌ ‘ವಿದ್ವಾಂಸ’ ಗುಂಡೇಟಿಗೆ ಬಲಿ..! ಮಸೀದಿಯಿಂದ ಹೊರಬರುತ್ತಿದ್ದಂತೆ ಅಪರಿಚಿತರಿಂದ ದಾಳಿ..!

433
Spread the love

ನ್ಯೂಸ್ ನಾಟೌಟ್ : ಭಾರತ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅಪಹರಣಕ್ಕೆ ಪಾಕಿಸ್ತಾನದ ಐಎಸ್‌ ಐ ಪತ್ತೆದಾರಿ ಏಜೆನ್ಸಿಗೆ ಸಹಾಯ ಮಾಡಿದ್ದ ಪಾಕ್‌ ವಿದ್ವಾಂಸ, ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾಗಿದ್ದಾನೆ.

ಶುಕ್ರವಾರ ರಾತ್ರಿ ರಿಸ್ಟಿವ್ ಬಲೂಚಿಸ್ತಾನ್ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಕೊಲೆಯಾದ ಮುಫ್ತಿ ಶಾ ಮಿರ್, ಬಲೂಚಿಸ್ತಾನದ ಪ್ರಮುಖ ಧಾರ್ಮಿಕ ವಿದ್ವಾಂಸ ಎನ್ನಲಾಗಿದೆ.

ರಾತ್ರಿ ಪ್ರಾರ್ಥನೆಯ ನಂತರ ಟರ್ಬಾಟ್‌ ನಲ್ಲಿ ಸ್ಥಳೀಯ ಮಸೀದಿಯಿಂದ ಹೊರಬರುತ್ತಿದ್ದಂತೆ, ಬೈಕ್‌ ನಲ್ಲಿ ಬಂದ ಬಂದೂಕುಧಾರಿಗಳು ಹಠಾತ್‌ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮುಫ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಮುಫ್ತಿ ಶಾ ಮಿರ್ ಮೂಲಭೂತವಾದಿ ಪಕ್ಷದ ಜಮಿಯಟ್ ಉಲೆಮಾ-ಇ-ಇಸ್ಲಾಂ (ಜುಐ) ಸದಸ್ಯನಾಗಿದ್ದ ಎನ್ನಲಾಗಿದೆ. ಶಸ್ತ್ರಾಸ್ತ್ರ ಮತ್ತು ಮಾನವ ಕಳ್ಳಸಾಗಣೆದಾರನಾಗಿ ಕೆಲಸ ಮಾಡಿದ್ದ ಈತನಿಗೆ ಐಎಸ್ ಐ ಜೊತೆ ನಂಟಿತ್ತು. ಆಗಾಗ್ಗೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳಿಗೆ ಭೇಟಿ ನೀಡುತ್ತಿದ್ದ. ಭಯೋತ್ಪಾದಕರು ಭಾರತೀಯ ಪ್ರಾಂತ್ಯಕ್ಕೆ ಒಳನುಸುಳಲು ಸಹಾಯ ಮಾಡುತ್ತಿದ್ದ ಎಂದು ವರದಿಗಳಾಗಿವೆ.

See also  IND vs PAK world cup 2023: ನಾಳಿನ ಭಾರತ -ಪಾಕಿಸ್ಥಾನ ಹೈವೋಲ್ಟೆಜ್ ಪಂದ್ಯಕ್ಕೆ 4 ಐಜಿ, 21 ಡಿಸಿಪಿ, 7 ಸಾವಿರ ಪೊಲೀಸ್ ನಿಯೋಜನೆ, ನರೇಂದ್ರ ಮೋದಿ ಸ್ಟೇಡಿಯಂಗೆ ಇಷ್ಟೊಂದು ಬಿಗಿ ಭದ್ರತೆ ಏಕೆ..?
  Ad Widget   Ad Widget   Ad Widget   Ad Widget