Latestಕ್ರೈಂದೇಶ-ವಿದೇಶವಾಣಿಜ್ಯವೈರಲ್ ನ್ಯೂಸ್

ಭಾರತದ ಅಡಕೆ ಹಾಳೆ ತಟ್ಟೆಗಳು ಅಮೆರಿಕ‌ದಲ್ಲಿ ಬ್ಯಾನ್..! ಅತಿ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಂಡು ಸ್ಥಳೀಯ ಉದ್ಯಮಿಗಳು ಕಂಗಾಲು..!

1k

ನ್ಯೂಸ್ ನಾಟೌಟ್ :ರಾಜ್ಯದ ಮಲೆನಾಡಿಗೆ ಆರ್ಥಿಕವಾಗಿ ಬಲ ತಂದುಕೊಡಬಲ್ಲ ಅಡಕೆ ಮರದ ಹಾಳೆಗಳಿಂದ ತಯಾರಿಸಲಾಗುವ ತಟ್ಟೆಗಳನ್ನು ಅಮೆರಿಕ ನಿಷೇಧ ಮಾಡಿದೆ. ಎಫ್ ​ಡಿಎ (ಆಹಾರ ಮತ್ತು ಔಷಧ ಆಡಳಿತ) ಸಂಸ್ಥೆ ಅಡಕೆ ತಟ್ಟೆಯಲ್ಲಿ ‘ಅಲ್ಕಾಲೈಡ್’ ಎಂಬ ಹಾನಿಕರಕ ಅಂಶವಿದೆ, ಇದನ್ನು ಬಳಸಿದರೆ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ವರದಿ ನೀಡಿದ್ದರಿಂದ ಭಾರತದಿಂದ ಆಮದಾಗುತ್ತಿರುವ ಅದರಲ್ಲೂ ಮುಖ್ಯವಾಗಿ, ಶಿವಮೊಗ್ಗ ಜಿಲ್ಲೆಯಿಂದ ರಫ್ತಾಗುತ್ತಿದ್ದ ಅಡಕೆ ತಟ್ಟೆಗಳು ನಿಷೇಧಕ್ಕೊಳಗಾಗಿವೆ.

ಇದರಿಂದಾಗಿ ಇದನ್ನೇ ಉದ್ಯಮವನ್ನಾಗಿಸಿಕೊಂಡವರು ಕಂಗಲಾಗಿದ್ದಾರೆ‌. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಅಡಿಕೆ ತಟ್ಟೆ ಉದ್ಯಮ ಪ್ರಾರಂಭಿಸಿದವರು, ಬ್ಯಾಂಕ್ ​ಗಳಿಂದ ಸಾಲ ಸೇರಿದಂತೆ ಇತರೆ ವ್ಯವಹಾರ ಮಾಡಿಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಲೆನಾಡಿನಲ್ಲಿ ತಯಾರಾಗುವ ಅಡಕೆ ತಟ್ಟೆಗಳು ಮುಖ್ಯವಾಗಿ ಅಮೆರಿಕದ ಮಾರುಕಟ್ಟೆಯನ್ನೇ ಅವಲಂಬಿಸಿತ್ತು. ಆ ದೇಶದಿಂದ ಹೆಚ್ಚೆಚ್ಚು ಆರ್ಡರ್​ಗಳು ಬರುತ್ತಿವೆ. ಆರ್ಡರ್ ಬಂದಂತೆ ಇಲ್ಲಿ ಉದ್ಯಮಿಗಳು ಬೇಡಿಕೆ ಪೂರೈಸುತ್ತಾರೆ. ಅಮೆರಿಕದಲ್ಲಿ ಭಾರತದ ಒಂದು ಅಡಕೆ ತಟ್ಟೆಯನ್ನು ಅವರ ಹೇಳಿದ ಅಳತೆಯಲ್ಲಿ ರವಾನಿಸಿದರೆ, ಇಲ್ಲಿನವರಿಗೆ 19 ರೂ. ಸಿಗುತ್ತದೆ. ಇದೀಗ ಅಡಕೆ ತಟ್ಟೆ ಬ್ಯಾನ್ ಮಾಡಿರುವುದರಿಂದ ಅಲ್ಲಿಂದ ಯಾವುದೇ ಆರ್ಡರ್ ಬಾರದೇ ಇಲ್ಲಿ ತಯಾರಾದ ಲೋಡ್‌ ಗಟ್ಟಲೆ ತಟ್ಟೆಗಳು ಇಲ್ಲಿಯೇ ಕೊಳೆಯುವಂತಾಗಿದೆ. ಅಮೆರಿಕ ಬ್ಯಾನ್‌ ಮಾಡಿದ್ದರಿಂದ ಯೋರೋಪಿಯನ್ ದೇಶಗಳಿಂದಲೂ ಬೇಡಿಕೆ‌ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಉದ್ಯಮಿಗಳು.

ಅಡಕೆ ತಟ್ಟೆ ಉದ್ಯಮವು ಸಣ್ಣದಾಗಿ ಸ್ಥಳೀಯವಾಗಿ ರಫ್ತಿಗೆ ಮಾತ್ರ ಮಾಡಲಾಗುತ್ತಿತ್ತು. ನಂತರ ಇದಕ್ಕೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾದ ಕಾರಣ ದೊಡ್ಡ ದೊಡ್ಡ ಫ್ಯಾಕ್ಟರಿಗಳನ್ನು ಮಾಡಲಾಯಿತು. ಇದರ ವಹಿವಾಟು ನೋಡಿ ಬ್ಯಾಂಕ್ ​ನವರು ಲಕ್ಷಾಂತರ ರೂ. ಸಾಲ ನೀಡುವಂತಾಯಿತು. ಎಂಎಸ್ ಎಂಇ-ಪಿಎಂಜಿಪಿ ಹಾಗೂ ಪ್ರಧಾನಮಂತ್ರಿ ರೋಜ್‌ ಗಾರ್ ಯೋಜನೆಯಡಿ ಸಾಲ ಸೌಲಭ್ಯ ನೀಡುತ್ತಿದ್ದಾರೆ. ಸಾಲ ಸೌಲಭ್ಯ ಪಡೆದು ಉದ್ಯಮವನ್ನು ನಡೆಸಲಾಗುತ್ತಿದೆ.‌ ನೂರಾರು ಜನ ಕಾರ್ಖಾನೆ ಪ್ರಾರಂಭಿಸಿದ್ದಾರೆ. ಸಾವಿರಾರು ಜನ ಉದ್ಯೋಗ ಅವಲಂಬಿಸಿಕೊಂಡಿದ್ದಾರೆ. ಈಗ ಬ್ಯಾನ್ ಮಾಡಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅಮೆರಿಕದ FDA ನೀಡಿರುವ ವರದಿ ಸತ್ಯಾಸತ್ಯತೆ ಕುರಿತು ಜಿಲ್ಲಾ ಅಡಕೆ ತಟ್ಟೆ ತಯಾರಕರು ಹಾಗೂ ವ್ಯಾಪಾರ ಸಂಘ ಸಂಶಯ ವ್ಯಕ್ತಪಡಿಸಿದ್ದಾರೆ.

ನಟ ಕಮಲ್ ಹಾಸನ್‌ ಗೆ ಕನ್ನಡ ಪುಸ್ತಕ ಉಡುಗೊರೆ ನೀಡಿದ `ಕನ್ನಡತಿ’ ಧಾರವಾಹಿ ಖ್ಯಾತಿಯ ನಟಿ ರಂಜನಿ..! ಇಲ್ಲಿದೆ ವೈರಲ್ ಪೋಸ್ಟ್

See also  'ಅಭಿ ಪಿಕ್ಚರ್ ಬಾಕಿ ಹೈ' ಎಂದ ಮಾಜಿ ಸೇನಾ ಮುಖ್ಯಸ್ಥ..! ಮನೋಜ್ ನರವನೆ ಯುದ್ಧದ ಸುಳಿವು ಕೊಟ್ಟರಾ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget