ಕ್ರೈಂವೈರಲ್ ನ್ಯೂಸ್

ರಾಯಭಾರ ಕಚೇರಿ ನೌಕರನ ಹನಿಟ್ರ್ಯಾಪ್‌..! ಸೇನೆಯ ಗೌಪ್ಯ ಮಾಹಿತಿ ಪಾಕ್‌ಗೆ ರವಾನೆ..?

201

ನ್ಯೂಸ್‌ ನಾಟೌಟ್‌ : ಮಾಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿದ್ದುಕೊಂಡೇ ಪಾಕಿಸ್ತಾನದ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿ ಹನಿ ಟ್ರ್ಯಾಪ್‌ಗೆ ಒಳಗಾಗಿ ಈ ಕೃತ್ಯ ಎಸಗುತ್ತಿದ್ದ ಎಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ತಿಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಆತನ ಜೊತೆ ಸ್ನೇಹ ಬೆಳೆಸಿದ್ದ ಮಹಿಳೆ, ಹನಿಟ್ರ್ಯಾಪ್ ಎಸಗಿದ್ದಾಳೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಶಹ್ಮಾಹಿದ್ದಿನ್‌ಪುರದ ಆರೋಪಿ ಸತೇಂದ್ರ ಸಿವಾಲ್‌ನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ‘ಪೂಜಾ ಮೆಹ್ರಾ ಎಂಬ ಸಾಮಾಜಿಕ ಮಾಧ್ಯಮ ಖಾತೆ ತೆರೆದಿದ್ದ ಮಹಿಳೆ ಕಳೆದ ವರ್ಷದಿಂದ ಸಿವಾಲ್ ಸಂಪರ್ಕದಲ್ಲಿದ್ದಳು.

ಆತನನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ, ಹಣಕ್ಕಾಗಿ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮನವೊಲಿಸಿದ್ದಳು’ಎಂದು ತ್ಯಾಗಿ ತಿಳಿಸಿದ್ದಾರೆ. ‘ಪೂಜಾ ಮೆಹ್ರಾ ಜೊತೆ ಹಂಚಿಕೊಂಡ ದಾಖಲೆಗಳು ಈಗಲೂ ತನ್ನ ಮೊಬೈಲ್‌ನಲ್ಲಿ ಇವೆ ಎಂದು ಸಿವಾಲ್ ತನಿಖೆ ವೇಳೆ ಒಪ್ಪಿಕೊಂಡಿದ್ದು, ಫೋನ್ ಸೇರಿದಂತೆ ಆತನು ಬಳಸಿದ ಇತರೆ ಗ್ಯಾಜೆಟ್‌ಗಳ ಪರಿಶೀಲನೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ’ಎಂದೂ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

ಯುದ್ಧ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಸೇರಿದಂತೆ ಭಾರತೀಯ ವಾಯುಪಡೆ ಮತ್ತು ನೌಕಾಪಡೆಯ ಶಸ್ತ್ರಾಸ್ತ್ರ ವ್ಯವಸ್ಥೆ ಕುರಿತ ಗೌಪ್ಯ ಮಾಹಿತಿಯನ್ನು ಸಿವಾಲ್ ಪಾಕಿಸ್ತಾನದ ಜೊತೆ ಹಂಚಿಕೊಂಡಿದ್ದ ಎಂದು ಮೀರತ್‌ನ ಎಟಿಎಸ್‌ ಇನ್ಸ್‌ಪೆಕ್ಟರ್ ರಾಜೀವ್ ತ್ಯಾಗಿ ಹೇಳಿದ್ದಾರೆ. ಸಿವಾಲ್ ಸದ್ಯ ಫೆಬ್ರುವರಿ 16ರ ವರೆಗಿನ 10 ದಿನಗಳ ಎಟಿಎಸ್‌ ಕಸ್ಟಡಿಯಲ್ಲಿದ್ದಾರೆ.

See also  ಮಡೆನೂರು ಮನು ಜೈಲಿನಿಂದ ರಿಲೀಸ್..! ಶಿವಣ್ಣ ಮತ್ತು ದರ್ಶನ್ ಬಗೆಗಿನ ಆಡಿಯೋ ನನ್ನದಲ್ಲ ಎಂದ ಮನು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget