Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪಾಕಿಸ್ತಾನದ 4 ವಾಯುನೆಲೆಗಳ ಮೇಲೆ ಭಾರತದಿಂದ ಕ್ಷಿಪಣಿ ದಾಳಿ..! ನೂರ್ ಖಾನ್ ವಾಯುನೆಲೆಯಲ್ಲಿ ಭಾರಿ ಸ್ಫೋಟ..!

473

ನ್ಯೂಸ್ ನಾಟೌಟ್: ಭಾರತದ ಗಡಿ ಪ್ರದೇಶದ ನಾಲ್ಕು ರಾಜ್ಯಗಳ 26 ನಗರ ಗುರಿಯಾಗಿಸಿ ಡ್ರೋನ್‌ ದಾಳಿ ನಡೆಸಿದ್ದ ಪಾಕಿಸ್ತಾನಕ್ಕೆ ಶನಿವಾರ(ಮೇ.10) ಮುಂಜಾನೆ ವೇಳೆ ಪಾಕಿಸ್ತಾನದ ರಾವಲ್ಪಿಂಡಿಯ ನೂರ್‌ ಖಾನ್‌ ವಾಯುನೆಲೆ ಸೇರಿ ನಾಲ್ಕು ವಾಯುನೆಲೆಗಳ ಮೇಲೆ ಭಾರತವು ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿ ಹೇಳಿದೆ. ಈ ದಾಳಿಯಿಂದ ಬೆದರಿದ ಪಾಕ್‌ ಇಸ್ಲಾಮಾಬಾದ್, ಲಾಹೋರ್‌, ಸಿಯಾಲ್‌ಕೋಟ್‌, ರಹೀಮ್‌ ಖಾನ್‌ ವಾಯುನೆಲೆಗಳಲ್ಲಿ ಎಲ್ಲಾ ನಾಗರಿಕ ಮತ್ತು ವಾಣಿಜ್ಯ ಸಂಚಾರಕ್ಕೆ ದೇಶದ ವಾಯುಪ್ರದೇಶವನ್ನು ಸದ್ಯಕ್ಕೆ ಬಂದ್‌ ಗೊಳಿಸಿದೆ.

ಇಸ್ಲಾಮಾಬಾದ್‌ ನಿಂದ 10 ಕಿ.ಮೀ ಕಡಿಮೆ ಅಂತರದಲ್ಲಿರುವ ಮತ್ತು ದೇಶದ ಮಿಲಿಟರಿ ಪ್ರಧಾನ ಕಚೇರಿಗೆ ಸಮೀಪವಿರುವ ದೇಶದ ಪ್ರಮುಖ ವಾಯುನೆಲೆಯಾದ ರಾವಲ್ಪಿಂಡಿಯಲ್ಲಿನ ನೂರ್ ಖಾನ್ ವಾಯುನೆಲೆಯಲ್ಲಿ ಭಾರಿ ಸ್ಫೋಟ, ಬೆಂಕಿ ಹೊತ್ತಿಕೊಂಡಿರುವುದು ಪಾಕಿಸ್ತಾನಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಹಿಂದೆ ಚಕ್ಲಾಲಾ ವಾಯುನೆಲೆ ಎಂದು ಕರೆಯಲಾಗುತ್ತಿದ್ದ ನೂರ್ ಖಾನ್ ಸೌಲಭ್ಯವು ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ಮಿಲಿಟರಿ ನೆಲೆಗಳಲ್ಲಿ ಒಂದಾಗಿದೆ, ಇದು ವಾಯುಪಡೆಯ ಕಾರ್ಯಾಚರಣೆಗಳ ಮತ್ತು ವಿಐಪಿ ಸಾರಿಗೆ ಘಟಕಗಳ ಹೊಂದಿದೆ. ಪಾಕಿಸ್ತಾನಿ ಸೇನೆಯ ಪ್ರಕಾರ, ನೂರ್ ಖಾನ್ ವಾಯುನೆಲೆಯ ಜೊತೆಗೆ, ಚಕ್ವಾಲ್ ನಗರದ ಮುರಿದ್ ವಾಯುನೆಲೆ ಮತ್ತು ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫಿಕಿ ವಾಯುನೆಲೆಯ ಮೇಲೂ ದಾಳಿ ನಡೆದಿದೆ. ಪಾಕಿಸ್ತಾನ ತನ್ನ ಎಲ್ಲಾ ವಾಯುಪ್ರದೇಶವನ್ನು ಸ್ಥಗಿತಗೊಳಿಸಿದೆ.

ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ರೂಪಾಯಿ ಸಾಲ ಕೊಟ್ಟ IMF..! ಭಾರತದ ವಿರೋಧದ ನಡುವೆಯೂ ಸಾಲ ಮಂಜೂರು..! 

ಅಗತ್ಯ ಬಿದ್ದರೆ ಮದರಸಾದ ಮಕ್ಕಳನ್ನು ಯುದ್ಧಕ್ಕೆ ಬಳಸಿಕೊಳ್ತೀವಿ ಎಂದ ಪಾಕ್‌ ರಕ್ಷಣಾ ಸಚಿವ..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ಕೇರಳದ ಭೂಕುಸಿತ ಉಲ್ಲೇಖಿಸಿ ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ..! ಅಮಾವಾಸ್ಯೆಯ ಬಳಿಕ ಎಲ್ಲವೂ ಬದಲಾಗುತ್ತಾ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget