ಕ್ರೈಂವಿಡಿಯೋವೈರಲ್ ನ್ಯೂಸ್

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ ಮಾಡಿದ್ದೇಕೆ? ಅಷ್ಟಕ್ಕೂ ಸೇನಾ ಹೆಲಿಕಾಪ್ಟರ್‌ ಗೆ ಏನಾಯ್ತು? ಇಲ್ಲಿದೆ ವೈರಲ್ ವಿಡಿಯೋ

300

ನ್ಯೂಸ್ ನಾಟೌಟ್: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​​ ತುರ್ತು ಭೂಸ್ಪರ್ಶಿಸಿದ ಘಟನೆ ಭೋಪಾಲ್​ನಲ್ಲಿ ಇಂದು (ಅ.1) ರಂದು ನಡೆದಿದೆ.

ಭಾರತೀಯ ವಾಯುಪಡೆಯ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಭಾನುವಾರ ಮಧ್ಯಪ್ರದೇಶದ ಭೋಪಾಲ್ ಬಳಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಲು ತಜ್ಞರ ತಂಡವು ದಾರಿಯಲ್ಲಿದೆ.

ಹೆಲಿಕಾಪ್ಟರ್‌ನಲ್ಲಿ ಆರು ಸೇನಾ ಸಿಬ್ಬಂದಿ ಇದ್ದರು. ಭೋಪಾಲ್‌ನಿಂದ 60 ಕಿಮೀ ದೂರದಲ್ಲಿರುವ ಬೆರಾಸಿಯಾದ ಹಳ್ಳಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಐಎಎಫ್‌ನ III ಎಚ್‌ಯು ಘಟಕದ ಹೆಲಿಕಾಪ್ಟರ್ ಭೋಪಾಲ್ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಡುಂಗರಿಯಾ ಗ್ರಾಮದ ಸರೋವರದ ಬಳಿಯ ಕಬ್ಬಿನ ಗದ್ದೆಯಲ್ಲಿ “ತುರ್ತು” ಲ್ಯಾಂಡಿಂಗ್ ಮಾಡಿದೆ.

ಇಂದು ಬೆಳಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಲಿಕಾಪ್ಟರ್ ಭೋಪಾಲ್‌ನಿಂದ ಝಾನ್ಸಿಗೆ ತೆರಳುತ್ತಿತ್ತು. ಈ ವೇಳೆ ಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಪೈಲಟ್ ಮತ್ತು ಐವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಸ್ಥಳದಲ್ಲಿದ್ದ ಬೆರಾಸಿಯಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನರೇಂದ್ರ ಕುಲಸ್ತೆ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.

See also  ಕಾಣೆಯಾಗಿದ್ದ ಬೆಳ್ಳಾರೆಯ ವಿವಾಹಿತೆ ಮೈಸೂರಿನಲ್ಲಿ ಪತ್ತೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget