ನ್ಯೂಸ್ ನಾಟೌಟ್: ಭಾರತದ ಮಿಲಿಟರಿ ವ್ಯವಸ್ಥೆ ಜಗತ್ತಿನಲ್ಲೇ 4 ಶಕ್ತಿಶಾಲಿ ಮಿಲಿಟರಿ ಎಂಬ ಹೆಗ್ಗಳಿಕೆ ಪಡೆದಿದೆ. ಆದರೂ ಭಾರತದ ವಿರುದ್ಧ ಪಾಕಿಸ್ತಾನ ಪದೇ ಪದೇ ಉಗ್ರರ ಮೂಲಕ ತೊಂದರೆ ಕೊಡುವ ಕೆಲಸ ಮಾಡುತ್ತಿದೆ.
ಅಮೆರಿಕ, ಚೀನಾ, ರಷ್ಯಾ ರೀತಿಯ ದೇಶಗಳ ಸಾಲಿನಲ್ಲಿ ಭಾರತೀಯ ಸೇನೆ ಕೂಡ ಇದ್ದು, ಹೀಗಿದ್ದಾಗ ಶತ್ರುಗಳನ್ನು ಕ್ಷಣಮಾತ್ರದಲ್ಲಿ ಉಡಾಯಿಸುವ ಶಕ್ತಿ ಕೂಡ ನಮ್ಮ ಭಾರತೀಯ ಸೇನೆಗೆ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವೆ 1960 ಸೆಪ್ಟೆಂಬರ್ 19 ರಂದು ಸಿಂಧೂ ಜಲ ಒಪ್ಪಂದ ನಡೆದಿತ್ತು. ಪಾಕ್ ನ 40 ಶೇಖಡ ಕೃಷಿ ಈ ನೀರನ್ನೇ ಅವಲಂಭಿಸಿದೆ. ಈಗ ಇದಕ್ಕೆ ಭಾರತ ತಡೆ ನೀಡಿದ್ದು, ಪಾಕ್ ಇದನ್ನು ಯುದ್ಧಕ್ಕೆ ಆಹ್ವಾನ ಎಂದು ಹೇಳಿದೆ.
ಭಾರತ ಇದೀಗ ಅಧಿಕೃತವಾಗಿ ಯುದ್ಧ ಶುರು ಮಾಡಿದಂತಿದೆ. ಪಾಪಿ ಪಾಕಿಸ್ತಾನ ಮೂಲಕ ಭಾರತಕ್ಕೆ ಬಂದು, 26 ಜನ ಭಾರತೀಯರನ್ನ ಕೊಲೆ ಮಾಡಿದ್ದ ಪಾಪಿ ಪಾಕಿಸ್ತಾನದ ಉಗ್ರರ ಬುಡಕ್ಕೆ ಬೆಂಕಿ ಹಚ್ಚಿದೆ ಭಾರತ.
ಇದಕ್ಕೆ ಮುಹೂರ್ತ ಎಂಬಂತೆ ಕಾಶ್ಮೀರದಲ್ಲಿ ಇರುವ ಉಗ್ರರ 2 ಮನೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಲಾಗಿದೆ. ಅದರಲ್ಲೂ ಪಾಕಿಸ್ತಾನದ ಜೊತೆಗೆ ಸೇರಿ ಈ ರೀತಿ ದಾಳಿ ನಡೆಸಿರುವ ಉಗ್ರರನ್ನ ಹುಡುಕಲಾಗುತ್ತಿದ್ದು, ಕಾಶ್ಮೀರದಲ್ಲಿ ಇರುವ ಉಗ್ರರ ಮತ್ತು ಅವರಿಗೆ ಆಶ್ರಯ ನೀಡಿದ ಮನೆ ಉಡೀಸ್ ಆಗುತ್ತಿವೆ. ಅದರಲ್ಲೂ ಭಯೋತ್ಪಾದಕರಿಗೆ ಈ ಮೂಲಕ ಖಡಿಕ್ ವಾರ್ನಿಂಗ್ ಕೂಡ ನೀಡಲಾಗಿದ್ದು, ಈ ಮೂಲಕ ಯುದ್ಧಕ್ಕೆ ರಣಕಹಳೆ ಮೊಳಗಿದೆ. ಭಾರತ ಪಾಕ್ ಗಡಿಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಈಗಾಗಲೇ ಗಡಿಯಲ್ಲಿ ಸೇನಾ ಮುಖ್ಯಸ್ಥರಾದ ಉಪೇಂದ್ರ ದ್ವಿವೇದಿ ಸೈನಿಕರ ಜೊತೆ ಮಾತುಕತೆ ನಡೆಸಿದ್ದಾರೆ.
ಕೊಡಗು: ಕಾಂಗ್ರೆಸ್ ನ ಹಿರಿಯ ಮುಖಂಡ ನಿಧನ..! ಮಡಿಕೇರಿಯಲ್ಲಿ ಮಿಟ್ಟು ಚಂಗಪ್ಪ ಅಂತ್ಯಸಂಸ್ಕಾರ