ನ್ಯೂಸ್ ನಾಟೌಟ್: ಇಂದು(ಎ.25) ಪಾಕಿಸ್ತಾನ ಸೈನಿಕರು ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭಾರತೀಯ ಸೇನೆಯೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ 1960 ಸೆಪ್ಟೆಂಬರ್ 19 ರಂದು ಸಿಂಧೂ ಜಲ ಒಪ್ಪಂದ ನಡೆದಿತ್ತು. ಪಾಕ್ ನ 40 ಶೇಖಡ ಕೃಷಿ ಈ ನೀರನ್ನೇ ಅವಲಂಭಿಸಿದೆ. ಈಗ ಇದಕ್ಕೆ ಭಾರತ ತಡೆ ನೀಡಿದ್ದು, ಪಾಕ್ ಇದನ್ನು ಯುದ್ಧಕ್ಕೆ ಆಹ್ವಾನ ಎಂದು ಹೇಳಿದೆ.
ಭಾರತ ಇದೀಗ ಅಧಿಕೃತವಾಗಿ ಯುದ್ಧ ಶುರು ಮಾಡಿದಂತಿದೆ. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು ಯಾವ ಸಮಯದಲ್ಲಾದರೂ ಯುದ್ಧ ತೀವ್ರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಭಾರತ ಪಾಕಿಸ್ತಾನಕ್ಕೆ ನೀಡಿದ್ದ 17 ಬಗೆಯ ವಿಸಾವನ್ನು ಅಧಿಕೃತವಾಗಿ ಇಂದು ರದ್ದು ಮಾಡಿ ಆದೇಶ ಹೊರಡಿಸಿದೆ.