ವಿಡಿಯೋವೈರಲ್ ನ್ಯೂಸ್

ಭಾರತದ ಧ್ವಜದ ಬಳಿ ನಿಲ್ಲುವಂತೆ ಪಾಕ್ ಆಟಗಾರನಿಗೆ ಹೇಳಿದ್ದೇಕೆ ನೀರಜ್ ಚೋಪ್ರಾ? ಧ್ವಜವಿಲ್ಲದೆ ನಿಂತಿದ್ದ ಬೆಳ್ಳಿ ಗೆದ್ದ ಪಾಕ್ ಆಟಗಾರ ಯಾರು..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ಹಂಗೇರಿಯ ಬುಡಾಪೆಸ್ಟ್‌’ನ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ವೈರಿಗಳೆಂದು ಹೇಳುತ್ತಿದ್ದ ಭಾರತ- ಪಾಕ್ ಆಟಗಾರರು ಇಲ್ಲಿ ಭ್ರಾತೃತ್ವ ಮೆರೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನ ಅರ್ಷದ್ ನದೀಮ್ ಇಬ್ಬರೂ ತಮ್ಮ ತಮ್ಮ ದೇಶಗಳಿಗಾಗಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ನೀರಜ್ ವಿಶ್ವ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಈ ಪಂದ್ಯಾವಳಿಯಲ್ಲಿ ಪದಕ ಗೆದ್ದ ಮೊದಲ ಪಾಕಿಸ್ತಾನಿ ಎಂಬ ಹೆಗ್ಗಳಿಕೆಗೆ ನದೀಮ್ ಪಾತ್ರರಾಗಿದ್ದಾರೆ.

ಈ ಪಂದ್ಯದ ಇತಿಹಾಸದ ಹೊರತಾಗಿ ಈ ಇಬ್ಬರು ಆಟಗಾರರು ಸಹೋದರತ್ವ ಮೆರೆದಿದ್ದು, ವಿಶ್ವದ ಗಮನ ಸೆಳೆದಿದೆ. ಅದು ಕ್ರಿಕೆಟ್ ಮೈದಾನವಾಗಲಿ ಅಥವಾ ಹಾಕಿ-ಫುಟ್ಬಾಲ್ ಆಗಿರಲಿ, ಭಾರತ-ಪಾಕಿಸ್ತಾನ ಆಟ ಇದೆ ಎಂದರೆ ಅಲ್ಲಿ ಉತ್ಸಾಹ ಕೊಂಚ ಹೆಚ್ಚೇ ಇರುತ್ತದೆ.

ನೀರಜ್ ಮತ್ತು ನದೀಮ್ ಇಬ್ಬರೂ ಈ ಪಂದ್ಯದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಗೆದ್ದಿದ್ದಾರೆ. ಆಟದ ಕೊನೆಯಲ್ಲಿ, ಕ್ರೀಡಾಪಟುಗಳು ತಮ್ಮ ದೇಶದ ರಾಷ್ಟ್ರಧ್ವಜದೊಂದಿಗೆ ಫೋಟೋಗೆ ಫೋಸ್ ಕೊಡುವುದು ವಾಡಿಕೆ. ಆದರೆ ಆ ಸಂದರ್ಭದಲ್ಲಿ ಪಾಕಿಸ್ತಾನದ ನದೀಮ್ ಕೈಯಲ್ಲಿ ಪಾಕ್ ಧ್ವಜ ಇರಲಿಲ್ಲ. ಆಗ ನೀರಜ್, ನದೀಮ್ ಅವರನ್ನು ಕರೆದು ಭಾರತದ ಧ್ವಜದ ಒಟ್ಟಿಗೆ ನಿಲ್ಲುವಂತೆ ಕೋರಿದ್ದಾರೆ. ಈ ಫೋಟೋ ಜೊತೆ ನೀರಜ್ ವ್ಯಕ್ತಿತ್ವವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

Related posts

ದೂರು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಿಟಿ ರವಿ ವಿರುದ್ಧ ಎಫ್.​ಐ.ಆರ್ ದಾಖಲು..! ಕೊಲೆಗೆ ಸಂಚು ಎಂದು ಹೆಬ್ಬಾಳ್ಕರ್ ವಿರುದ್ಧವೂ ಪ್ರತಿ ದೂರು..!

ಕರ್ನಾಟಕದ ಮಾಜಿ ಸಿಂಗಂ ಗೆ ಸುಪ್ರೀಂಕೋರ್ಟ್ ನಿಂದ ರಿಲೀಫ್..! ಮಾಜಿ ಐಪಿಎಸ್ ಅಣ್ಣಾಮಲೈ ವಿರುದ್ಧ ಇದ್ದ ಪ್ರಕರಣಗಳೇನು..?

ಸಂಪಾಜೆಗೆ ಹಿಂಡಿಂಡು ಕಾಡು ಪ್ರಾಣಿಗಳ ದಾಳಿ..! ಕಾಡಾನೆ, ಚಿರತೆ, ಕಾಡುಕೋಣದ ಹಾವಳಿಗೆ ತತ್ತರಿಸಿದ ಜನ..! ನಿತ್ಯ ಪ್ರಾಣ ಭಯದ ಸಂಕಟ ಅಧಿಕಾರಿಗಳಿಗೆ ಕೇಳದೇ..?