ನ್ಯೂಸ್ ನಾಟೌಟ್: ಸೌದಿ ಅರೇಬಿಯಾ ಹಜ್ ಯಾತ್ರೆಗೂ ಮುಂಚಿತವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಹಜ್ ಯಾತ್ರೆ ಹಿನ್ನೆಲೆ ಜನಸಂದಣಿಯನ್ನು ನಿಯಂತ್ರಿಸುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಜ್ ಯಾತ್ರೆಯು ಮುಕ್ತಾಯಗೊಳ್ಳುವವರೆಗೆ ಅಂದರೆ ಜೂನ್ ಮಧ್ಯದವರೆಗೆ ನಿಷೇಧವು ಜಾರಿಯಲ್ಲಿರಲಿದೆ.
ಸೌದಿ ಅರೇಬಿಯಾ ಉಮ್ರಾ, ವ್ಯಾಪಾರ ಮತ್ತು ಕೌಟುಂಬಿಕ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ನೋಂದಣಿ ಇಲ್ಲದ ವ್ಯಕ್ತಿಗಳು ಹಜ್ ನಿರ್ವಹಿಸಲು ಪ್ರಯತ್ನಿಸುವುದನ್ನು ತಡೆಯಲು, ಜನಸಂದಣಿಯನ್ನು ನಿಯಂತ್ರಿಸಲು, ಹಜ್ ವೇಳೆ ಕಾಲ್ತುಳಿತದಂತಹ ಘಟನೆಯನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ವೀಸಾ ನಿಯಮಾವಳಿಗಳನ್ನು ಬಿಗಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪರಿಷ್ಕೃತ ನಿಯಮಗಳ ಪ್ರಕಾರ ಈ ವರ್ಷ ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಲು ಎಪ್ರಿಲ್ 13, 2025 ಕೊನೆಯ ದಿನವಾಗಿದೆ. ಆ ಬಳಿಕ ಹಜ್ ಮುಕ್ತಾಯದವರೆಗೆ ಯಾವುದೇ ಹೊಸ ಉಮ್ರಾ ವೀಸಾಗಳನ್ನು ನೀಡಲಾಗುವುದಿಲ್ಲ.
ಮೊಟ್ಟೆ ತಿನ್ನುತ್ತಾ, ಎಣ್ಣೆ ಹೊಡೆಯುತ್ತಾ ಮೆಟ್ರೋದಲ್ಲಿ ಹುಚ್ಚಾಟ..! ವಿಡಿಯೋ ವೈರಲ್
ಮಾವನ ಮೇಲೆಯೇ ಸೊಸೆಗೆ ಪ್ರೀತಿ..! ನಾಪತ್ತೆ ಪ್ರಕರಣ ದಾಖಲಾದ ಬಳಿಕ ಠಾಣೆಗೆ ಬಂದು ಹಾಜರಾದ ಜೋಡಿ ಹೇಳಿದ್ದೇನು..?