ದೇಶ-ಪ್ರಪಂಚ

ಪ್ರಿಯಕರನಿಗಾಗಿ ಪಾಕಿಸ್ತಾನ(Pakistan)ದಿಂದ ಭಾರತಕ್ಕೆ ಬಂದ 4 ಮಕ್ಕಳ ತಾಯಿಗೆ ಹೊಸ ಜೀವನದ ಕನಸು, ಗಂಡನ ಬಿಟ್ಟು ಪ್ರಿಯಕರ ಜೊತೆಗೆ ಬದುಕುವುದಕ್ಕೆ ನಿರ್ಧಾರ..!

ನ್ಯೂಸ್ ನಾಟೌಟ್ : ಪಬ್‌ಜಿ(Pubg) ಗೇಮ್ ಆಡುತ್ತಾ ಯುವಕನೊಂದಿಗೆ ಪರಿಚಯವಾಗಿ ,ಪರಿಚಯ ಪ್ರೀತಿಗೆ ತಿರುಗಿ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದ ಮಹಿಳೆಯೊಬ್ಬಳು ಭಾರತಕ್ಕೆ ಬಂದಿರುವ ರೋಚಕ ಘಟನೆ ವರದಿಯಾಗಿತ್ತು.ವೀಸಾ ಇಲ್ಲದೆ ನೇಪಾಳದ ಮೂಲಕ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ತಾನ ಮೂಲದ ಸೀಮಾಳನ್ನು ಜುಲೈ 4ರಂದು ಬಂಧಿಸಲಾಯಿತು.ಆಕೆಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಪ್ರಿಯಕರ ಸಚಿನ್​ನನ್ನು ಕೂಡ ಜೈಲಿಗೆ ಅಟ್ಟಲಾಗಿತ್ತು.ಇದೀಗ ಇಬ್ಬರು ಬಿಡುಗಡೆಯಾಗಿದ್ದು ಹೊಸ ಜೀವನ ಆರಂಭಿಸುವ ತವಕದಲ್ಲಿದ್ದಾರೆ..!

ಹೌದು , ಈ ಕಥೆ ಯಾವುದೇ ಸಿನಿಮಾ ಕಥೆಗೂ ಹೊರತಾಗಿಲ್ಲ..,ಇವರಿಬ್ಬರ ಪ್ರೇಮಕಥೆ ಓದಿ ತುಂಬಾ ಮಂದಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.ರಾಷ್ಟ್ರ ರಾಜಧಾನಿ ದೆಹಲಿಯ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಭಾರತದ ಸಚಿನ್​ ಮೀನಾ ಮತ್ತು ಪಾಕಿಸ್ತಾನದ ಸೀಮಾ ಹೈದರ್​ ಇದೀಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಎದುರು ನೋಡುತ್ತಿದ್ದಾರೆ. ಪ್ರಿಯಕರನಿಗಾಗಿ ಪಾಕ್​ನಿಂದ ಭಾರತಕ್ಕೆ ಬಂದಿರುವ ಸೀಮಾ, ಇದೀಗ ಭಾರತ ನನ್ನದು ಎಂದು ಹೇಳಿಕೊಂಡಿದ್ದಾಳೆ!

ಕೋವಿಡ್ ಸಮಯದಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಯಿತು. ಬಳಿಕ 30 ವರ್ಷದ ಸೀಮಾ ಹಾಗೂ 25 ವರ್ಷದ ಸಚಿನ್​ ಕಳೆದ ಮಾರ್ಚ್​ ತಿಂಗಳಲ್ಲಿ ನೇಪಾಳದಲ್ಲಿ ಮದುವೆಯಾದರು. ಇದು ಇವರಿಬ್ಬರ ಮೊದಲ ಭೇಟಿಯಾಗಿತ್ತು. ಮೊದಲ ಭೇಟಿಯಲ್ಲೇ ಮದುವೆ ಮಾಡಿಕೊಂಡಿದ್ದರು. ಅಲ್ಲಿಂದ ಭಾರತಕ್ಕೆ ಬಂದು ಇಲ್ಲಿನ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು, ಇಬ್ಬರು ಜೈಲುಪಾಲಾಗಿದ್ದರು. ಇದೀಗ ಇಬ್ಬರು ಬಿಡುಗಡೆಯಾಗಿದ್ದಾರೆ.ಹೊಸ ಜೀವನ ಪ್ರಾರಂಭಿಸಲು ಎಂಟ್ರಿ ಕೊಟ್ಟಿದ್ದಾರೆ..

ಈ ಬಗ್ಗೆ ಮಾತನಾಡುತ್ತಾ ಖುಷಿ ವ್ಯಕ್ತ ಪಡಿಸಿರುವ ಸೀಮಾ, ನನ್ನ ಪತಿ ಹಿಂದು. ಹೀಗಾಗಿ ನಾನೂ ಕೂಡ ಹಿಂದು. ಈಗ ನಾನು ಕೂಡ ಭಾರತೀಯಳು ಎಂಬ ಭಾವನೆ ವ್ಯಕ್ತವಾಗುತ್ತಿದೆ. ಅದೊಂದು ಸುದೀರ್ಘ ಮತ್ತು ಕಠಿಣ ಪ್ರಯಾಣವಾಗಿತ್ತು. ಎಂದು ಸೀಮಾ ಹೇಳಿದ್ದಾರೆ

12 ಲಕ್ಷ ಪಾಕಿಸ್ತಾನಿ ರೂಪಾಯಿಗೆ ತುಂಡು ಜಾಗವನ್ನು ಮಾರಿ ವಿಮಾನದ ಟಿಕೆಟ್​ ಮತ್ತು ನೇಪಾಳಕ್ಕೆ ವೀಸಾವನ್ನು ಪಡೆದು ತನ್ನ ನಾಲ್ವರು ಮಕ್ಕಳೊಂದಿಗೆ ಮೇ ತಿಂಗಳಲ್ಲಿ ದುಬೈನಿಂದ ನೇಪಾಳಕ್ಕೆ ಬಂದಳು. ಬಳಿಕ ಪೊಖಾರಗೆ ತೆರಳಿ, ಅಲ್ಲಿಂದ ಕಠ್ಮಂಡುವಿಗೆ ಹೋಗಿ ದೆಹಲಿಗೆ ತೆರಳುವ ಬಸ್​ ಹಿಡಿದು ತನ್ನ ನಾಲ್ವರು ಮಕ್ಕಳೊಂದಿಗೆ ಮೇ 13ರಂದು ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾವನ್ನು ತಲುಪಿದಳು. ಅವಳು ಬರುವುದನ್ನು ಮೊದಲೇ ತಿಳಿದಿದ್ದ ಸಚಿನ್​​, ಆಕೆ ಪಾಕಿಸ್ತಾನಿ ಎಂಬುದು ಗೊತ್ತಾಗದಂತೆ ಗುರುತನ್ನು ಮರೆಮಾಚಿ, ಬಾಡಿಗೆ ಮನೆಯೊಂದರಲ್ಲಿ ಉಳಿದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಸೌದಿ ಅರೇಬಿಯಾದಿಂದ ವಿಡಿಯೋ ಸಂದೇಶ ರವಾನಿಸಿರುವ ಸೀಮಾ ಪತಿ ಗುಲಾಮ್​ ಹೈದರ್​, ತನ್ನ ಪತ್ನಿಯನ್ನು ಮರಳಿ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಆದರೆ, ನಾನು ಪಾಕಿಸ್ತಾನಕ್ಕೆ ಹೋದರೆ ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾಳೆ ಸೀಮಾ. ಮರಳಿ ಪಾಕ್​ಗೆ ಹೋಗಲಾರೆ ಎಂದಿದ್ದಾಳೆ.

Related posts

ಸಣ್ಣ ಮಕ್ಕಳಿಂದ ಎಡೆಬಿಡದೆ ಬರುತ್ತಿವೆ 112 ಕ್ಕೆ ತುರ್ತು ಕರೆಗಳು..! ಸುಸ್ತಾದ ಪೊಲೀಸರು ಹೇಳೋದೇನು..?

ಥೈಲ್ಯಾಂಡ್‌ನಿಂದ ಅಯೋಧ್ಯೆ ರಾಮಮಂದಿರಕ್ಕೆ ಮಣ್ಣು ತರುತ್ತಿರುದೇಕೆ..? ಥೈಲ್ಯಾಂಡ್‌ ನ ಆ ನಗರಕ್ಕೂ ಅಯೋಧ್ಯೆಗೂ ಏನು ಸಂಬಂಧ?

ಅಂದು ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನು ಖರೀದಿಸಿದ ನಟಿ ಅದಾ ಶರ್ಮಾ..! ಯಾರಿಗೂ ಬೇಡವಾಗಿದ್ದ ಮನೆಯನ್ನು ಆಕೆ ಖರೀದಿಸಿದ್ದೇಕೆ..?