ದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಭಾರತದಿಂದ ಕಳ್ಳಸಾಗಣೆಯಾಗಿದ್ದ 297 ಪ್ರಾಚೀನ ವಸ್ತುಗಳನ್ನು ಮೋದಿಗೆ ಹಸ್ತಾಂತರಿಸಿದ ಅಮೆರಿಕ ಅಧ್ಯಕ್ಷ, ಜೋ ಬೈಡನ್ ಗೆ ಧನ್ಯವಾದ ತಿಳಿಸಿದ ನರೇಂದ್ರ ಮೋದಿ

228

ನ್ಯೂಸ್‌ ನಾಟೌಟ್‌: ಪ್ರಧಾನಿ ನರೇಂದ್ರ ಮೋದಿಯ ಅಮೆರಿಕ ಪ್ರವಾಸ ಯಶಸ್ವಿಯಾಗಿದ್ದು, ಕಳ್ಳಸಾಗಾಣಿಕೆ ಮೂಲಕ ದೇಶದಿಂದ ಹೊರ ಹೋಗಿದ್ದ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ 297 ವಿಶಿಷ್ಟ ಕಲಾಕೃತಿಗಳು ಮತ್ತು ವಸ್ತುಗಳು ಮತ್ತೆ ಭಾರತಕ್ಕೆ ಮರಳಲಿದೆ. ಬೆಲೆಬಾಳುವ ಮತ್ತು ಪುರಾತನ ವಸ್ತುಗಳ ಕಳ್ಳತನ ಮತ್ತು ಕಳ್ಳಸಾಗಣೆ ಬಹಳ ಹಿಂದಿನಿಂದಲೂ ಗಂಭೀರ ಸಮಸ್ಯೆಯಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅಧ್ಯಕ್ಷ ಬೈಡನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

297 ಅಪರೂಪದ ಕಲಾಕೃತಿಗಳನ್ನು ಹಿಂದಿರುಗಿಸಿದ್ದಕ್ಕಾಗಿ ನಾವು ಅಧ್ಯಕ್ಷ ಜೋ ಬೈಡನ್ ಮತ್ತು ಅಮೆರಿಕ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ ಎಂದರು. 2021ರಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಹೋದಾಗ 157 ವಸ್ತುಗಳನ್ನು ಸ್ವೀಕರಿಸಿದ್ದರು.

ಇದರಲ್ಲಿ 12ನೇ ಶತಮಾನದ ನಟರಾಜ ವಿಗ್ರಹವೂ ಸೇರಿದೆ. 2023 ರಲ್ಲಿ ಪ್ರಧಾನಿ ಮೋದಿಯವರ ಭೇಟಿಯ ನಂತರ ಅಮೆರಿಕವು ಭಾರತಕ್ಕೆ 105 ವಸ್ತುಗಳನ್ನು ಹಿಂದಿರುಗಿಸಿತು. ಈ ಮೂಲಕ ಅಮೆರಿಕವೊಂದರಿಂದಲೇ ಇಲ್ಲಿಯವರೆಗೆ 578 ಪುರಾತನ ಹಾಗೂ ಬೆಲೆ ಕಟ್ಟಲಾಗದ ವಸ್ತುಗಳನ್ನು ಭಾರತಕ್ಕೆ ವಾಪಸ್ ಮಾಡಲಾಗಿದೆ. ಅಮೆರಿಕದ ಹೊರತಾಗಿ, ಯುಕೆಯಿಂದ 16 ಮತ್ತು ಆಸ್ಟ್ರೇಲಿಯಾದಿಂದ 14 ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Click

https://newsnotout.com/2024/09/muniratna-supporters-threate-to-evidence-kannada-news-case-bengaluru/
https://newsnotout.com/2024/09/kollegala-car-kannada-news-friday-near-bus-stand-police-issue/
https://newsnotout.com/2024/09/digital-upi-payment-innovation-by-auto-driver-kannada-news/
https://newsnotout.com/2024/09/bengaluru-express-train-fire-kannada-news-viral-news-fire/
https://newsnotout.com/2024/09/mangaluru-panamburu-beach-kannada-news-nomore-issue/
See also  ಚೈತ್ರಾ ಕುಂದಾಪುರ ಮೇಲೆ ಮತ್ತೊಂದು ಎಫ್‌ಐಆರ್‌! ಉಡುಪಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲು..! ಏನಿದು ಹೊಸಾ ಕೇಸ್?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget