Latestಕ್ರೈಂ

ಪಬ್​ಜೀ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್ ಗೆ ಸಂಕಷ್ಟ!ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗ್ತಾರಾ ನಾಲ್ಕು ಮಕ್ಕಳ ತಾಯಿ?

469

ನ್ಯೂಸ್ ನಾಟೌಟ್: ಸೀಮಾ ಹೈದರ್​​ ಗೆ ಸಂಕಷ್ಟ ಎದುರಾಗಿದೆ.ಪಬ್​ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್​​ ಸಾಕಷ್ಟು ಸುದ್ದಿಯಾದವರು.ಆದ್ರೆ ಇದೀಗ ಸೀಮಾ ಹೈದರ್ ಭಾರಿ​ ಸಂಕಷ್ಟದಲ್ಲಿದ್ದಾರೆ. 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತದಲ್ಲಿರೋ ಎಲ್ಲಾ ಪಾಕಿಸ್ತಾನಿ ಪ್ರಜೆಗಳು 48 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ. ಈ ಬೆನ್ನಲ್ಲೇ ಪಾಕಿಸ್ತಾನದಿಂದ ಸಚಿನ್​ ಜೊತೆಗೆ ವಾಸಿಸಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ 5 ಪ್ರಮುಖ ನಿರ್ಣಯಗಳನ್ನ ಕೈಗೊಂಡಿದೆ. ಅದರಲ್ಲಿ ಪಾಕಿಸ್ತಾನಕ್ಕೆ ಹೋಗಿರುವವರು ಮೇ.1ರ ಒಳಗಾಗಿ ಭಾರತಕ್ಕೆ ಮರಳಬೇಕು. ಅಲ್ಲದೇ ಭಾರತದಲ್ಲಿರೋ ಪಾಕ್ ಪ್ರಜೆಗಳಿಗೆ ಇಲ್ಲಿಂದ ತೆರಳಲು 48 ಗಂಟೆಗಳ ಗಡುವು ನೀಡಲಾಗಿದೆ. ಹೀಗಾಗಿ ಸೀಮಾ ಹೈದರ್ ಮತ್ತೆ ಪಾಕಿಸ್ತಾನಕ್ಕೆ ಹೋಗುತ್ತಾಳಾ ಇಲ್ಲವಾ ಎಂದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಈ ಬಗ್ಗೆ ನೆಟ್ಟಿಗರು ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ. ಕನಿಷ್ಠ 3 ರಾಷ್ಟ್ರೀಯ ಗಡಿಗಳನ್ನು ದಾಟಿ ಉತ್ತರ ಪ್ರದೇಶ ತಲುಪಲು ಅವಕಾಶ ನೀಡಿದ ಪ್ರತಿಯೊಂದು ಭದ್ರತಾ ಸಂಸ್ಥೆಯನ್ನು ಸಹ ತನಿಖೆ ಮಾಡಿ ಎಂದು ಬರೆದುಕೊಂಡಿದ್ದಾರೆ. ಸರ್ಕಾರ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಭಾರತದಿಂದ ಹೊರಹೋಗುವಂತೆ ಕೇಳಿದಾಗ, ಸೀಮಾ ಹೈದರ್ ಅವರಿಗೆ ಏಕೆ ಉಳಿಯಲು ಅವಕಾಶ ನೀಡಲಾಗಿದೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ದಯವಿಟ್ಟು ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.ಆದ್ರೆ ಸೀಮಾ ಹೈದರ್ ಭಾರತವನ್ನು ಬಿಟ್ಟು ಮತ್ತೆ 4 ಮಕ್ಕಳನ್ನು ಕರೆದುಕೊಂಡು ಪಾಕಿಸ್ತಾನಕ್ಕೆ ಹೋಗ್ತಾರಾ ಅಂತ ಕಾದು ನೋಡಬೇಕಿದೆ.

See also  ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ..! ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ಅನಾಹುತ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget