ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆಗೆ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದ ಕೆನಡಾ ಸಂಸತ್ತು..! ಆರೋಪಿಗಳೆಂದು 4 ಭಾರತೀಯರನ್ನು ಬಂಧಿಸಿದ ಕೆನಡಾ

ನ್ಯೂಸ್ ನಾಟೌಟ್: ಕೆನಡಾದ ಸಂಸತ್ತು ಮಂಗಳವಾರ(ಜೂ.18) ಹೌಸ್ ಆಫ್ ಕಾಮನ್‌ ನಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಹತ್ಯೆಯಾದ ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ಗೆ ಗೌರವ ಸಲ್ಲಿಸಿ ಸುದ್ದಿಯಾಗಿದೆ.

ಖಲಿಸ್ತಾನಿ ಭಯೋತ್ಪಾದಕನಿಗೆ ಕೆನಡಾ ಸಂಸತ್ತು ಗೌರವ ಸಲ್ಲಿಸಿದ್ದಕ್ಕೆ ಭಾರತ (India) ಖಂಡಿಸಿದೆ. ಈ ಬಗ್ಗೆ ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರತಿಕ್ರಿಯೆ ನೀಡಿದೆ. ಏರ್ ಇಂಡಿಯಾ ವಿಮಾನ ‘ಕನಿಷ್ಕಾ182’ ಮೇಲೆ ನಡೆದ ಬಾಂಬ್ ದಾಳಿಯನ್ನು ಜಗತ್ತಿಗೆ ನೆನಪಿಸಿದೆ.

ಕೆನಡಾ ಹರ್ದೀಪ್ ಸಿಂಗ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರತಿಯಾಗಿ ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ 1985ರಲ್ಲಿ ಏರ್ ಇಂಡಿಯಾ ಕಾನಿಷ್ಕಾ ವಿಮಾನದ ಮೇಲೆ ಖಲಿಸ್ತಾನಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ 329 ಜನರನ್ನು ಸ್ಮರಿಸಲು ತೀರ್ಮಾನಿಸಿದೆ, ಇದರಲ್ಲಿ ಉಗ್ರ ಹರ್ದೀಪ್ ಸಿಂಗ್ ಮುಖ್ಯ ರೂವಾರಿಯಾಗಿದ್ದ. ಭಾನುವಾರ ಸಂಜೆ 6:30ಕ್ಕೆ ಮೌನಾಚರಣೆ ನಡೆಸಲು ಭಾರತ ತೀರ್ಮಾನಿಸಿದೆ. ನಿಜ್ಜರ್ ಹತ್ಯೆಯ ಕುರಿತು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತನಿಖೆ ನಡೆಸುತ್ತಿದ್ದು, ನಾಲ್ವರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ.

Click 👇

https://newsnotout.com/2024/06/darshan-and-gang-internal-matter-revealed-to-police
https://newsnotout.com/2024/06/kannada-news-student-food-quality
https://newsnotout.com/2024/06/vijayalakshmi-wife-of-darshan-kannada-news-legal-fight-kannada-news

Related posts

ಆನ್ ​ಲೈನ್ ಗೇಮ್ ​ನಲ್ಲಿ ಗುರುಪ್ರಸಾದ್ 70 ಲಕ್ಷ ರೂಪಾಯಿ ಕಳೆದುಕೊಂಡಿದ್ದ ಎಂದ ನಟ ಜಗ್ಗೇಶ್..! ಇಲ್ಲಿದೆ ಸಂಪೂರ್ಣ ಮಾಹಿತಿ

ಮೇಕೆಗಳನ್ನು ಆಟೋದಲ್ಲಿ ತುಂಬಿಕೊಂಡು ಪೊಲೀಸ್ ಠಾಣೆಗೆ ತಂದದ್ದೇಕೆ ರೈತ? ಹೂವಿನ ಬೆಳೆಗೆ ಹಾನಿ ಮಾಡಿದ್ದಕ್ಕೆ ಇದೆಂಥಾ ಶಿಕ್ಷೆ..?

ಐತಿಹಾಸಿಕ ಗೆಲುವು ಸಾಧಿಸಿದ ನನ್ನ ಸ್ನೇಹಿತನಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದ ಮೋದಿ, ಟ್ರಂಪ್ ಗೆಲುವಿನ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು..?