Latestದೇಶ-ವಿದೇಶವೈರಲ್ ನ್ಯೂಸ್

ಸೂಚನೆ ನೀಡದೆ ಝಿಲಂ ನದಿ ನೀರನ್ನು ಪಾಕ್ ಗೆ ಹರಿಸಿದ ಭಾರತ..! ಕೃತಕ ಪ್ರವಾಹಕ್ಕೆ ತುರ್ತು ಪರಿಸ್ಥಿತಿ ಘೋಷಿಸಿದ ಪಾಕ್ ನ ಸ್ಥಳೀಯಾಡಳಿತ..!

757

ನ್ಯೂಸ್ ನಾಟೌಟ್: ನೀರು ಹರಿಯುವುದನ್ನು ನಿಲ್ಲಿಸಿದರೆ ನಾವು ಭಾರತದಲ್ಲಿ ರಕ್ತದ ನದಿಯನ್ನು ಹರಿಸುತ್ತೇವೆ ಎಂದಿದ್ದ ಪಾಕಿಸ್ತಾನದಲ್ಲಿ ಈಗ ದಿಢೀರ್‌ ಕೃತಕ ಪ್ರವಾಹ ಉಂಟಾಗಿದೆ.

ಭಾರತ ಉರಿ ಜಲಾಶಯದಿಂದ ಝಿಲಂ ನದಿಗೆ ಸೂಚನೆ ನೀಡದೆ ಭಾರೀ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಿದ್ದರಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಮುಜಾಫರಾಬಾದ್‌ ನಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದ ಬೆನ್ನಲ್ಲೇ ನದಿ ದಂಡೆಯಲ್ಲಿ ವಾಸಿಸುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ಯಾವುದೇ ಪೂರ್ವಸೂಚನೆ ನೀಡದೇ ಭಾರತ ಏಕಾಏಕಿ ನದಿಗೆ ನೀರನ್ನು ಹರಿಸಿದೆ ಎಂದು ಪಾಕ್‌ ಮಾಧ್ಯಮಗಳು ಭಾರತದ ವಿರುದ್ಧ ಆರೋಪ ಮಾಡಿದೆ.

ಝೀಲಂ ನದಿಯ ದಡದಲ್ಲಿರುವ ಮುಜಫರಾಬಾದ್‌ ನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಹಟ್ಟಿಯನ್ ಬಾಲಾದಲ್ಲಿ ಸ್ಥಳೀಯ ಆಡಳಿತವು ನೆರೆಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಕಟಣೆ ಹೊರಡಿಸಲಾಗಿದ್ದು ನದಿಗೆ ಇಳಿಯದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದೆ. ಈ ಪ್ರಕಟಣೆಯಿಂದ ನದಿ ದಂಡೆಗಳ ಬಳಿ ವಾಸಿಸುವ ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿದೆ ಎಂದು ವರದಿ ಮಾಡಿವೆ.

ಕಾಶ್ಮೀರದ ಅನಂತನಾಗ್‌ ನಿಂದ ನೀರು ಪ್ರವೇಶಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಚಕೋತಿ ಪ್ರದೇಶದ ನೀರಿನ ಮಟ್ಟ ದಿಢೀರ್‌ ಏರಿಕೆಯಾಗಿದೆ. ಪಾಕಿಸ್ತಾನದ ಅಧಿಕಾರಿಗಳು ಈ ನಿರ್ಧಾರವನ್ನು ಖಂಡಿಸಿದ್ದು ಇದು ಅಂತರರಾಷ್ಟ್ರೀಯ ನಿಯಮಗಳು ಮತ್ತು ನೀರಿನ ಒಪ್ಪಂದಗಳ ಸಂಪೂರ್ಣ ಉಲ್ಲಂಘನೆ ಎಂದು ಹೇಳಿದ್ದಾರೆ.
ನೀರು ರಭಸವಾಗಿ ಹರಿಯಲು ಆರಂಭಿಸಿತ್ತು. ನಾವು ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಈಗ ಹೆಣಗಾಡುತ್ತಿದ್ದೇವೆ ಎಂದು ಪಾಕ್‌ ಆಕ್ರಮಿತ ಕಾಶ್ಮೀರದ ನದಿ ದಂಡೆಯಲ್ಲಿರುವ ಡುಮೆಲ್ ಎಂಬ ಹಳ್ಳಿಯ ನಿವಾಸಿಗಳು ಹೇಳಿದ್ದಾರೆ. 

ಭಾರತವು ಉದ್ದೇಶಪೂರ್ವಕ ‘ಜಲ ಭಯೋತ್ಪಾದನೆಯಲ್ಲಿ’ ತೊಡಗಿದೆ ಎಂದು ಪಿಒಕೆ ಸರ್ಕಾರ ಆರೋಪಿಸಿದೆ.

See also  ಖ್ಯಾತ ಸಾಹಿತಿ ಎಚ್.​ಎಸ್​ ವೆಂಕಟೇಶಮೂರ್ತಿ ನಿಧನ..! ರಾಷ್ಟ್ರಪ್ರಶಸ್ತಿ ವಿಜೇತ ‘ಚಿನ್ನಾರಿ ಮುತ್ತ' ಚಿತ್ರಕ್ಕೆ ಕಥೆ ಮತ್ತು ಹಾಡುಗಳುನ್ನು ಬರೆದಿದ್ದ ಕವಿ

 

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget