ನ್ಯೂಸ್ ನಾಟೌಟ್: ಭಾರತದ ಜೊತೆ ಸದಾ ತಿಕ್ಕಾಟದಲ್ಲಿ ಇರುವ ಪಾಕಿಸ್ತಾನದೊಳಗೆ ಅಲ್ಲಿನ ಪ್ರಜೆಗಳೇ ಭಾರತ ಪರವಾಗಿ ಮಾತನಾಡಿದ್ದಾರೆ. ಈ ಕುರಿತಂತೆ ಮೌಲಾನವೊಬ್ಬರ ಭಾಷಣ ವೈರಲ್ ಆಗಿದೆ.
ಪಾಕಿಸ್ತಾನದ ದೇವೋಬಂದಿ ಧರ್ಮಗುರು ಮೌಲಾನ ಅಬ್ದುಲ್ ಅಜೀಜ್ ಘಾಜಿ (Maulana Abdul Aziz Ghazi) ಎಂಬವರು ತಮ್ಮ ಭಾಷಣದಲ್ಲಿ ಪಾಕಿಸ್ತಾದದ ಆಡಳಿತದ ಮೇಲೆ ವಾಗ್ದಾಳಿ ಮಾಡಿದ್ದಾರೆ. ಪಾಕಿಸ್ತಾನವೇ ಹೆಚ್ಚು ಶೋಷಣೆ ಮಾಡುತ್ತದೆ. ಬಲೂಚರು, ಪಶ್ತುನ್ನರು, ಪಿಟಿಐ ಕಾರ್ಯಕರ್ತರು, ಧಾರ್ಮಿಕ ಮುಖಂಡರು, ಪತ್ರಕರ್ತರನ್ನು ಪಾಕಿಸ್ತಾನ ಹತ್ತಿಕ್ಕುತ್ತಿದೆ. ವಜಿರಿಸ್ತಾನದಲ್ಲಿ ಲಾಲ್ ಮಸೀದಿಗೆ ಬಾಂಬ್ ಹಾಕಿದ್ದು ಭಾರತವಲ್ಲ, ಪಾಕಿಸ್ತಾನ ಎಂದು ಹೇಳಿದ್ದಾರೆ.
#Islamabad, #Pakistan
Abdul Aziz Ghazi, Imam of famous Lal Masjid, Islambad urges people to not support Pakistan in India-Pakistan war , says muslims are worse off in Pakistan than India. Pak forces abduct & bomb muslims in Pakistan, India doesn’t do that with Indian muslims.” pic.twitter.com/8rUFfdgvZq— Ninjamonkey 🇮🇳 (@Aryan_warlord) May 5, 2025
ಇನ್ನೂ ಮುಂದುವರಿದ ಅವರು, ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧವಾದಲ್ಲಿ ಪಾಕಿಸ್ತಾನಕ್ಕೆ ಯಾರು ಬೆಂಬಲ ನೀಡುತ್ತೀರಿ ಎಂದು ಮೌಲಾನ ಅಬ್ದುಲ್ ಅಜೀಜ್ ಘಾಜಿ ಕೇಳಿದಾಗ, ಸಭಿಕರಲ್ಲಿ ಒಬ್ಬರೂ ಕೈ ಎತ್ತಲಿಲ್ಲ.
ಪಾಕಿಸ್ತಾನದಲ್ಲಿ ಬಲೂಚಿಸ್ತಾನದ ಬಂಡುಕೋರರು ಭಾರತಕ್ಕೆ ಮುಕ್ತವಾಗಿ ಬೆಂಬಲ ನೀಡುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನ, ಗಿಲ್ಗಿಟ್ ಬಾಲ್ಟಿಸ್ತಾನ್, ಖೈಬರ್ ಪಖ್ತುಂಕ್ವ ಪ್ರದೇಶಗಳಲ್ಲಿ ಪಾಕಿಸ್ತಾನ ಹಿಡಿತ ಕಳೆದುಕೊಳ್ಳುತ್ತಿದೆ ಎನ್ನಲಾಗಿದೆ. ಪಾಕ್ ತನ್ನ ಆಂತರಿಕ ಕಲಹಗಳ ಜೊತೆಗೆ ತನ್ನ ಪ್ರಜೆಗಳಿಗೂ ಹಿಂಸೆ ನೀಡುತ್ತಿದೆ ಎನ್ನುವುದು ವಿಪರ್ಯಾಸ.
ಕೇದಾರನಾಥ ದೇಗುಲದ ಬಳಿ ಡಿಜೆ ಹಾಡಿಗೆ ಯುವಕರ ನೃತ್ಯ..! ವಿಡಿಯೋ ವೈರಲ್, ಪ್ರಕರಣ ದಾಖಲು
ಸರ್ಕಾರಿ ಶಾಲೆಯ ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ನಡುವೆ ಹೊಡೆದಾಟ..! ವಿಡಿಯೋ ವೈರಲ್