Latestಕ್ರೈಂದೇಶ-ವಿದೇಶ

ಭಾರತದ ದಾಳಿಯಿಂದ ನಮ್ಮನ್ನು ದೇವರೇ ಕಾಪಾಡಬೇಕು ಎಂದು ಪಾಕ್ ಸಂಸತ್ ನಲ್ಲಿ ಕಣ್ಣೀರಿಟ್ಟ ಸಂಸದ..! ಇಲ್ಲಿದೆ ವಿಡಿಯೋ

1.1k

ನ್ಯೂಸ್ ನಾಟೌಟ್: ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಪಾಕಿಸ್ತಾನದ ಸಂಸತ್ತಿನಲ್ಲಿಯೂ ಭಾರತದ ದಾಳಿಯ ಭೀತಿ ಪ್ರತಿಧ್ವನಿಸಿದೆ.

ಸಂಸತ್ತಿನಲ್ಲಿ ಚರ್ಚೆಯ ಸಮಯದಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನಿ ಸಂಸದ ತಾಹಿರ್ ಇಕ್ಬಾಲ್ ಭಾರತೀಯ ದಾಳಿಯನ್ನು ಉಲ್ಲೇಖಿಸಿ ಕಣ್ಣೀರಿಡಲು ಪ್ರಾರಂಭಿಸಿದ್ದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಭಾರತದ ದಾಳಿಯಿಂದ ಪಾಕಿಸ್ತಾನವನ್ನು ರಕ್ಷಿಸುವಂತೆ ಸಂಸತ್ ನಲ್ಲಿ ಮನವಿ ಮಾಡುತ್ತಿದ್ದ ಇಕ್ಬಾಲ್, “ಓ ದೇವರೇ, ಇವತ್ತು ನಮ್ಮನ್ನು ಕಾಪಾಡು “ಅಲ್ಲಾಹನು ನಮ್ಮ ದೇಶವನ್ನು ರಕ್ಷಿಸಲಿ ಮತ್ತು ನಮ್ಮನ್ನು ಒಗ್ಗಟ್ಟಿನಿಂದ ಇಡಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ಗದ್ಗದಿತರಾಗಿ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ.

ಮತ್ತೊಬ್ಬ ಮಹಿಳಾ ಸಂಸದೆಯೂ ಭಾರತದ ದಾಳಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಲಾಹೋರ್ ನಲ್ಲಿ ಭಾರತ ದಾಳಿ ಮಾಡುತ್ತಿದೆ, ಜನರನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ನಿನ್ನೆ ರಾತ್ರಿಯೂ ಪಾಕಿಸ್ತಾನ ಭಾರತದ 15 ನಗರಗಳನ್ನು ಗುರಿಯಾಗಿಸಿಕೊಂಡಿತ್ತು. ರಾತ್ರಿ 1 ಗಂಟೆಯ ಸುಮಾರಿಗೆ ಪಾಕಿಸ್ತಾನ ಡ್ರೋನ್‌ಗಳೊಂದಿಗೆ ದಾಳಿ ಮಾಡಿತ್ತು ಮತ್ತು ಕ್ಷಿಪಣಿಗಳನ್ನು ಹಾರಿಸಿತ್ತು. ಆದರೆ ಪಾಕಿಸ್ತಾನದ ಪ್ರತಿಯೊಂದು ದಾಳಿಯನ್ನು ಭಾರತ ವಿಫಲಗೊಳಿಸಿದ್ದು, ಲಾಹೋರ್ ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ನ್ನು ನಾಶ ಮಾಡಿದೆ.

See also  ಕುಂಭಮೇಳದ ವೈರಲ್ ಸುಂದರಿಗೆ ಸಿಕ್ತು ಮತ್ತೊಂದು ಫಿಲ್ಮ್ ನ ಅವಕಾಶ..! ಮೊದಲ ಸಿನಿಮಾದ ಕಥೆ ಏನು ? ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget