ನ್ಯೂಸ್ ನಾಟೌಟ್: ಭಾರತ ಪಾಕ್ ನಡುವಿನ ತಿಕ್ಕಾಟದ ನಡುವೆ, ಭಾರತಕ್ಕೆ ಆಗಮಿಸಿದ್ದ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಪತ್ನಿ ಉಷಾ ವ್ಯಾನ್ಸ್ ಹಾಗೂ ಮೂವರು ಮಕ್ಕಳು ಇಂದು(ಎ.24) ಬೆಳಗ್ಗೆ ಜೈಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ವಾಷಿಂಗ್ಟನ್ ಗೆ ಮರಳಿದರು.
ಸೋಮವಾರ ದೆಹಲಿಗೆ ಆಗಮಿಸಿದ್ದ ವ್ಯಾನ್ಸ್ ತಮ್ಮ 3 ದಿನಗಳ ಪ್ರವಾಸದಲ್ಲಿ ದೇಶದ ಪ್ರಮುಖ ಸ್ಥಳಗಳಿಗೆ ಭೇಟಿ ಕೊಟ್ಟಿದ್ದರು.
ಪ್ರಧಾನಿ ಮೋದಿಯನ್ನು ಭೇಟಿಯಾಗಿ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಇನ್ನು ಮಂಗಳವಾರ ಆಮೇರ್ ಕೋಟೆಗೆ ಹಾಗೂ ಬುಧವಾರ ತಾಜ್‌ಮಹಲ್‌ಗೆ ಭೇಟಿ ನೀಡಿದ್ದಾರೆ. ಇಂದು ಮತ್ತೆ ತವರಿಗೆ ಮರಳಿದ್ದಾರೆ.