Latestಕ್ರೈಂದೇಶ-ವಿದೇಶ

ನಮ್ಮ ಜತೆ ಮಾತುಕತೆಗೆ ಭಾರತವನ್ನು ನೀವೇ ಒಪ್ಪಿಸಬೇಕು ಎಂದು ಟ್ರಂಪ್ ​ಗೆ ಮನವಿ ಮಾಡಿದ ಪಾಕ್ ಪ್ರಧಾನಿ..! ಇಲ್ಲಿದೆ ಸಂಪೂರ್ಣ ಮಾಹಿತಿ

614

ನ್ಯೂಸ್ ನಾಟೌಟ್ :‘‘ನಮ್ಮ ಜತೆ ಮಾತುಕತೆಗೆ ಭಾರತವನ್ನು ನೀವೇ ಒಪ್ಪಿಸಬೇಕು’’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಮನವಿ ಮಾಡಿದ್ದಾರೆ. ಈಗಾಗಲೇ ಭಾರತವು ಪಾಕಿಸ್ತಾನ ಭಯೋತ್ಪಾದನೆಗೆ ಸಹಕಾರ ನೀಡುವುದನ್ನು ಬಿಡುವವರೆಗೂ ಅವರೊಂದಿಗೆ ಬೇರೆ ಯಾವ ರೀತಿ ಮಾತುಕತೆಯೂ ಇಲ್ಲ ಇನ್ನೇನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಮಾತನಾಡುತ್ತೇವೆ ಎಂದು ಹೇಳಿತ್ತು.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ​ನಲ್ಲಿ ಪಾಕಿಸ್ತಾನ ಮೂಲದ ಉಗ್ರರು ಅಮಾಯಕ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಅದಕ್ಕೂ ಮೊದಲು ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿತ್ತು, ಇದರಿಂದ ಭಾರತದ ಮೂಲಕ ಪಾಕಿಸ್ತಾನಕ್ಕೆ ಹೋಗುವ ನೀರಿಗೆ ತಡೆ ಬಿದ್ದಿತ್ತು.

ಈ ನಿರ್ಧಾರವು ಪಾಕಿಸ್ತಾನದಲ್ಲಿ ನೀರಿನ ಅಭಾವ ಸೃಷ್ಟಿಸಿದೆ. ಏರ್ ​​ಪೋರ್ಟ್​ನಲ್ಲಿ ಕೂಡ ನೀರು ಇಲ್ಲದೆ ಜನ ಪರದಾಡುವಂತಾಗಿದೆ. ಮೇ 10ರಂದು ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದವು. ಪಾಕಿಸ್ತಾನವು ಸಿಂಧೂ ನದಿ ಒಪ್ಪಂದದ ವಿಚಾರವಾಗಿ ಮಾತನಾಡಲು ಬಯಸಿತ್ತು ಆದರೆ ಭಾರತ ಅದಕ್ಕೆ ಸಿದ್ಧವಿರಲಿಲ್ಲ.

ಪಾಕಿಸ್ತಾನದಿಂದ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಈ ಒಪ್ಪಂದದ ಬಗ್ಗೆ ಮಾತಿಲ್ಲ ಎಂದು ಸ್ಪಷ್ಟಪಡಿಸಿತ್ತು. ಪ್ರಧಾನಿ ಮೋದಿ ಕೂಡ ರಕ್ತ ಹಾಗೂ ನೀರು ಒಂದೇ ಬಾರಿ ಹರಿಯಲು ಸಾಧ್ಯವಿಲ್ಲ ಎಂದು ಕರಾರುವಕ್ಕಾಗಿ ಹೇಳಿದ್ದರು. ಹೀಗಾಗಿ ಪಾಕಿಸ್ತಾನವು ಹೇಗೂ ಭಾರತ ಹಾಗೂ ಅಮೆರಿಕ ಸಂಬಂಧ ತುಂಬಾ ಚೆನ್ನಾಗಿದೆ ಎಂಬುದು ತಿಳಿದಿದ್ದು, ಭಾರತವನ್ನು ಒಪ್ಪಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಮನವಿ ಮಾಡಿದ್ದಾರೆ.

ಭಾರತದೊಂದಿಗಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಟ್ರಂಪ್ ಮಾಡಿರುವ ಪ್ರಯತ್ನಗಳನ್ನು ಪಾಕ್ ಪ್ರಧಾನಿ ಶ್ಲಾಘಿಸಿದರು ಮತ್ತು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಸಂವಾದವನ್ನು ಉತ್ತೇಜಿಸುವಲ್ಲಿ ಅಮೆರಿಕ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣ; ಮೃತಪಟ್ಟ 11 ಮಂದಿಯಲ್ಲಿ ಚಿನ್ಮಯಿ ಶೆಟ್ಟಿ ಉಪ್ಪಿನಂಗಡಿ ಮೂಲದವರು

ವರ್ಷದ ಹಿಂದೆಯಷ್ಟೇ ಮದುವೆ ಆಗಿದ್ದ ಅಕ್ಷತಾ RCB ವಿಜಯೋತ್ಸವದಲ್ಲಿ ಸಾವು..! ಗಂಡನ ಎದುರೇ ಜೀವ ಬಿಟ್ಟ ಸಾಫ್ಟ್ ​ವೇರ್ ಇಂಜಿನಿಯರ್..!

See also  ಬಡ್ಡಡ್ಕ: ನಾಯಿ- ಕೋಳಿ ನಿತ್ಯವೂ ಚಿರತೆ ಬಾಯಿಗೆ ಆಹಾರ..!, ಕಳೆದೊಂದು ವಾರದಿಂದ ಮಿತಿಮೀರಿದ ಚಿರತೆಯ ಅಟ್ಟಹಾಸ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget