Latestಕ್ರೈಂದೇಶ-ವಿದೇಶ

ಭಾರತ-ಪಾಕ್ ಸಂಘರ್ಷ: ಚಂಡೀಗಢ ಸರ್ಕಾರದಿಂದ 2 ತಿಂಗಳು ಸ್ಪೋಟಕ ಮತ್ತು ಪಟಾಕಿ ಬ್ಯಾನ್..! ಮಾರಾಟ ಮತ್ತು ಖರೀದಿಯೂ ನಿಷೇಧ..!

322

ನ್ಯೂಸ್ ನಾಟೌಟ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಚಂಡೀಗಢ ಸರ್ಕಾರ 2 ತಿಂಗಳುಗಳ ಕಾಲ ಪಟಾಕಿ ನಿಷೇಧಿಸಿದೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕ್ ನಡುವಿನ ಕಾದಾಟ ಹೆಚ್ಚಾಗುತ್ತಿದೆ. ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ `ಆಪರೇಷನ್ ಸಿಂಧೂರ’ದಡಿಯಲ್ಲಿ ಭಾರತೀಯ ಸೇನೆ ಪಾಕ್ ಮೇಲೆ ವಾಯುದಾಳಿ ನಡೆಸಿತ್ತು. ಬಳಿಕ ಗುರುವಾರ ರಾತ್ರಿ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತವು ತಕ್ಕ ಉತ್ತರ ನೀಡಿದೆ.

ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಯುದ್ಧ ಭೀತಿ ಹಿನ್ನೆಲೆ ಇದೀಗ ಚಂಡೀಗಢ ಸರ್ಕಾರ ಎರಡು ತಿಂಗಳುಗಳ ಪಟಾಕಿ ನಿಷೇಧಿಸಿದೆ. ಮದುವೆ, ಶುಭ ಸಮಾರಂಭಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಇನ್ನೂ ರಾಜಸ್ಥಾನದ ಜೈಸಲ್ಮೇರ್‌ ನಲ್ಲಿಯೂ ಪಟಾಕಿ ಸಿಡಿಸುವುದರ ಜೊತೆಗೆ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸಿಲಾಗಿದೆ.

ಈ ಕುರಿತು ಚಂಡೀಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಶಾಂತ್ ಕುಮಾರ್ ಯಾದವ್ ಮಾತನಾಡಿ, 2023ರ ಬಿಎನ್‌ ಎಸ್ (BNS) ಸೆಕ್ಷನ್ 163ರ ಅಡಿಯಲ್ಲಿ 2025ರ ಮೇ 09 ರಿಂದ ಜುಲೈ 7ರವರೆಗೆ ಪಟಾಕಿ ನಿಷೇಧಿಸಲಾಗಿದೆ ಎಂದು ಆದೇಶಿಸಿದ್ದಾರೆ.

ಕಾರಣ ಯುದ್ಧ ಸಂದರ್ಭದಲ್ಲಿ ಈ ರೀತಿ ಪಟಾಕಿ ಶಬ್ದವು ಡ್ರೋನ್ ಹಾಗೂ ಕ್ಷಿಪಣೆ ದಾಳಿಯ ಭ್ರಮೆಯನ್ನು ಸೃಷ್ಟಿಸಿ, ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತದೆ. ಮತ್ತು ದೇಶದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗೆ ತೊಂದರೆಯಾಗಬಹುದು ಎನ್ನಲಾಗಿದೆ.

ಭಾರತ-ಪಾಕ್ ಸಂಘರ್ಷದಲ್ಲಿ ಭಾರತೀಯ ಯೋಧ ಹುತಾತ್ಮ..! ಆಂಧ್ರಪ್ರದೇಶ ಮೂಲದ ಯೋಧ..!

See also  ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ, ಅಡ್ಕಾರು ಬಳಿ ನಾಲ್ಕು ಲಾರಿಗಳನ್ನು ವಶಕ್ಕೆ ಪಡೆದ ಸುಳ್ಯ ಪೊಲೀಸರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget