ದೇಶ-ವಿದೇಶವೈರಲ್ ನ್ಯೂಸ್

ಮಾಲ್ಡೀವ್ಸ್ ಸೇನಾ ಪೈಲಟ್‌ ಗಳಿಗೆ ಭಾರತ ಕೊಟ್ಟ ವಿಮಾನಗಳನ್ನು ಹಾರಿಸಲು ಬರಲ್ಲ ಎಂದು ಒಪ್ಪಿಕೊಂಡ ರಕ್ಷಣಾ ಸಚಿವ..! ಭಾರತ ಕೊಟ್ಟ ಉಡುಗೊರೆ ದ್ವೀಪರಾಷ್ಟ್ರಕ್ಕೆ ಹೊರೆಯಾಯ್ತಾ..?

ನ್ಯೂಸ್ ನಾಟೌಟ್ : ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಒತ್ತಾಯದ ಮೇರೆಗೆ 76 ಭಾರತೀಯ ರಕ್ಷಣಾ ಸಿಬ್ಬಂದಿ ಮಾಲ್ಡೀವ್ಸ್ ತೊರೆದ ಕೆಲವೇ ದಿನಗಳಲ್ಲಿಯೇ ಭಾರತ ಕೊಡುಗೆಯಾಗಿ ನೀಡಿದ ಮೂರು ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಪೈಲಟ್‌ಗಳು ದೇಶದ ಮಿಲಿಟರಿಯಲ್ಲಿ ಇನ್ನೂ ಇಲ್ಲ ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವ ಘಾಸನ್ ಮೌಮೂನ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಇದು ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಭಾನುವಾರ(ಮೇ.12) ಮಾಲ್ಡೀವ್ಸ್ ನ ಮಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಈ ವಿಷಯ ತಿಳಿಸಿದ್ದಾರೆ. ಹಿಂದಿನ ಆಡಳಿತದಲ್ಲಿ ವಿಮಾನವನ್ನು ಹಾರಿಸಲು ತರಬೇತಿಯನ್ನು ಪ್ರಾರಂಭಿಸಿದ ಮಾಲ್ಡೀವಿಯನ್ ಸೈನಿಕರು ಕಾರಣಾಂತರಗಳಿಂದ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡೋರ್ನಿಯರ್ ಅನ್ನು ಹಾರಿಸಲು ಪರವಾನಗಿ ಪಡೆದ ಅಥವಾ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಪೈಲಟ್‌ ನಮ್ಮ ಪಡೆಯಲ್ಲಿ ಇಲ್ಲ ಎಂದಿದ್ದಾರೆ.

ಚೀನಾ ಪರ ಧೋರಣೆಯುಳ್ಳ ನಾಯಕರಾಗಿ ಗುರುತಿಸಿಕೊಂಡಿರುವ ಮುಯಿಝು, ಮೇ 10ರ ಒಳಗೆ ಭಾರತವು ತನ್ನ ಸಂಪೂರ್ಣ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಗಡುವು ನೀಡಿದ್ದರು. ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ಉಭಯ ದೇಶಗಳ ನಡುವಿನ ಒಪ್ಪಂದದ ನಂತರ ಮೇ 10 ರ ಗಡುವಿನ ಪ್ರಕಾರ, ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ವಿಮಾನಗಳಿಗಾಗಿ ಎರಡು ಪ್ಲಾಟ್‌ಫಾರ್ಮ್‌ಗಳನ್ನು ನಿರ್ವಹಿಸಲು ಮಾಲ್ಡೀವ್ಸ್‌ನಲ್ಲಿ ನೆಲೆಸಿದ್ದ ಭಾರತೀಯ ಮಿಲಿಟರಿ ಸಿಬ್ಬಂದಿ ಮಾಲೆ ತೊರೆದು ಶುಕ್ರವಾರ ಭಾರತಕ್ಕೆ ಮರಳಿದ್ದರು.

Click 👇

https://newsnotout.com/2024/05/children-and-masjid-mavlvi
https://newsnotout.com/2024/05/petrol-price-60-years-ago

Related posts

ಜಮ್ಮು-ಕಾಶ್ಮೀರದಲ್ಲಿ ದಶಕಗಳ ಬಳಿಕ ಇಂದು(ಸೆ.18) ವಿಧಾನಸಭಾ ಚುನಾವಣೆಗೆ ಮತದಾನ..! ಇಲ್ಲಿದೆ ಸಂಪೂರ್ಣ ಮಾಹಿತಿ

ಏರ್ ಟೆಲ್ ರಿಚಾರ್ಜ್ ದರ ಹೆಚ್ಚಳ..! ಜಿಯೋ ಬೆನ್ನಲ್ಲೇ ಭಾರತಿ ಏರ್ ಟೆಲ್ ಗ್ರಾಹಕರಿಗೂ ಶಾಕ್..! ಇಲ್ಲಿದೆ ಸಂಪೂರ್ಣ ವಿವರ

“ರಜನಿಕಾಂತ್‌ ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ” ಎಂದ ಈ ನಟಿ ಯಾರು?ಏನಿದು ವಿವಾದ..? ಈ ಬಗ್ಗೆ ನಟಿ ಹೇಳಿದ್ದೇನು?