ವೈರಲ್ ನ್ಯೂಸ್

49 ವರ್ಷದ ಮಹಿಳೆಯನ್ನು ಮದುವೆಯಾದ 103 ರ ವೃದ್ಧ..! ಸ್ವಾತಂತ್ರ್ಯ ಹೋರಾಟಗಾರನಿಗಿದು ಮೂರನೆ ಮದುವೆ..!

ನ್ಯೂಸ್ ನಾಟೌಟ್: 103 ವರ್ಷದ ವ್ಯಕ್ತಿ 49 ವರ್ಷದ ಮಹಿಳೆಯನ್ನು ಮದುವೆಯಾಗಿರುವ ಘಟನೆ ಭೋಪಾಲ್​ನಲ್ಲಿ ನಡೆದಿದ್ದು, ಇವರಿಬ್ಬರು 2023ರಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

103 ವರ್ಷದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭೋಪಾಲ್‌ನ ಇಟ್ವಾರದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹಬೀಬ್ ನಜರ್, ಕಳೆದ ವರ್ಷ 49 ವರ್ಷದ ಫಿರೋಜ್ ಜಹಾನ್ ಅವರೊಂದಿಗೆ ವಿವಾಹವಾಗಿದ್ದಾರೆ.

ಸಾಕಷ್ಟು ಮಂದಿ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ, ಶುಭ ಹಾರೈಕೆಯ ಸುರಿಮಳೆಯ ನಡುವೆಯೇ ಅವರು ವಧುವಿನೊಂದಿಗೆ ಆಟೋ ರಿಕ್ಷಾದಲ್ಲಿ ಬರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ನಾಜರ್ ನ ಮೂರನೇ ಮದುವೆಯಾಗಿದ್ದು, ಅವರ ಎರಡನೇ ಹೆಂಡತಿಯ ಕಾಲವಾದ ನಂತರ, ನಾಜರ್ ಒಂಟಿತನವನ್ನು ಅನುಭವಿಸಿದರು, ಇದೇ ಕಾರಣಕ್ಕೆ ಮತ್ತೊಂದು ಮದುವೆಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಅವರ ಪತ್ನಿಯಾಗಿ ಬಂದಿರುವ ಫಿರೋಜ್ ಜಹಾನ್​ ಕೂಡ ತನ್ನ ಪತಿಯನ್ನು ಕಳೆದುಕೊಂಡಿದ್ದರು. ವಯಸ್ಸಾದ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿಕೊಳ್ಳಲು ಯಾರಾದರೂ ಬೇಕೇ ಬೇಕು ಎಂಬುದನ್ನು ಅರಿತು ಅನುಕಂಪದಿಂದ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.

https://newsnotout.com/2024/01/bjp-mandya-priyanka-karge/
https://www.youtube.com/watch?v=1JnHTxLJRGA

Related posts

1001 ಬಡಿಗೆಗಳಿಂದ ಪರಸ್ಪರ ಬಡಿದಾಡಿಕೊಳ್ಳುವ ವಿಚಿತ್ರ ಜಾತ್ರೆ..! 3 ವರ್ಷಕ್ಕೊಮ್ಮೆ ನಡೆಯುತ್ತೆ ಜುಮ್ಮಣ್ಣ ಅಜ್ಜನ ಈ ಜಾತ್ರೆ..!

ಕಾರು ಓಡಿಸಿ ಇಬ್ಬರನ್ನು ಕೊಂದ ಉದ್ಯಮಿ ಪುತ್ರನಿಗೆ ರಾಜಮರ್ಯಾದೆ..! ಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾದ ಪೊಲೀಸ್..!

ತೋಚಿದ್ದು ಗೀಚಿ SSLC ಜಸ್ಟ್ ಪಾಸ್ ಆದ ಮಂಗಳೂರಿನ ಬಾಲಕ, ಬ್ಯಾನರ್ ಹಾಕಿ ಶುಭ ಕೋರಿದ ಸ್ನೇಹಿತರು, ಕುಚುಕು ದೋಸ್ತ್ ಗಳ ಬ್ಯಾನರ್ ನಲ್ಲೇನಿದೆ ?