ನ್ಯೂಸ್ ನಾಟೌಟ್: ಸುಳ್ಯದ ಹೋಟೆಲ್ ಉದ್ಯಮದಲ್ಲಿ ಶುಚಿ, ರುಚಿಯ ಆಹಾರದಿಂದಲೇ ಜನಮನ ಗೆದ್ದಿರುವ ಶುದ್ಧ ಸಸ್ಯಹಾರಿ ‘ವೆಜ್ಝ್ ರೆಸ್ಟೋರೆಂಟ್’ ಹೋಟೆಲ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಶುಕ್ರವಾರ ಆಚರಿಸಲಾಯಿತು. ವೀರ ಯೋಧರಿಗೆ ಸನ್ಮಾನ, ದೇಶ ಭಕ್ತಿ ಗೀತೆ ಗಾಯನ, ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸುವ ಮೂಲಕ ಆ.15ರ ದಿನವನ್ನು ಸ್ಮರಣೀಯವಾಗಿಸಲಾಯಿತು.
ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ವೀರ ಯೋಧ ಸಂಪಾಜೆಯ ಗೂನಡ್ಕದ ಕೆ.ಪಿ. ಜಗದೀಶ್, ಇಂಡೋ ಟಿಬೇಟ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿಎಫ್)ನ ನಿವೃತ್ತ ಯೋಧ ಪಂಜದ ಕೂತ್ಕುಂಜ ಗ್ರಾಮದ ಹೇಮನಾಥ್ ಹಾಗೂ ಮತ್ತೋರ್ವ ನಿವೃತ್ತ ಯೋಧ ತಿರುಮಲೇಶ್ವರ್ ಪೈಚಾರ್ ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ವೆಜ್ಝ್ ರೆಸ್ಟೋರೆಂಟ್ ಆಡಳಿತ ಮಂಡಳಿಯ ಮುನಾವರ್ ಅವರು, ‘ನಾವು ಎಲ್ಲೇ ಇದ್ದರೂ ಹೇಗೆಯೇ ಇದ್ದರೂ ನಮ್ಮ ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ. ಅದು ನಮ್ಮ ದೇಶದ ಸಂಸ್ಕೃತಿ ಮತ್ತು ಶಕ್ತಿ, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಅಂತಹ ಮಹನೀಯರ ಬಲಿದಾನಗಳಿಂದ ನಾವು ಇಂದು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಬಲಿದಾನಗೈದ ಎಲ್ಲ ದೇಶ ಪ್ರೇಮಿ ನಾಯಕರನ್ನು ನಾವು ಈ ಸಂದರ್ಭದಲ್ಲಿ ನಮ್ಮ ಹೃದಯಂತರಾಳದಿಂದ ಸ್ಮರಿಸುತ್ತೇವೆ’ ಎಂದು ತಿಳಿಸಿದರು.
ವೆಜ್ ರೆಸ್ಟೋರೆಂಟ್ ನ ಆಡಳಿತ ಮಂಡಳಿಯ ವ್ಯವಸ್ಥಾಪಕ ನಂದ ಕುಮಾರ್, ಖಲಂದರ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ಗಾಯಕಿ ಹರ್ಷಿತಾ ಕೊಡಿಯಾಲಬೈಲು ದೇಶ ಭಕ್ತಿ ಗೀತೆ ಗಾಯನ ಮೂಲಕ ನೆರೆದಿದ್ದ ಜನರಲ್ಲಿ ದೇಶ ಭಕ್ತಿಯ ಸಂಚಲನ ಮೂಡಿಸಿದರು. ಇಂದು ಸಂಜೆ (ಆ.15) 6 ಗಂಟೆಯಿಂದ ವೆಜ್ಝ್ ರೆಸ್ಟೋರೆಂಟ್ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹರ್ಷಿತಾ ಕೊಡಿಯಾಲಬೈಲು ಮತ್ತು ತಂಡದವರಿಂದ ವಿಶೇಷವಾದ ಗಾಯನ ನಡೆಯಲಿದೆ. ತಾವೆಲ್ಲರು ಬಂದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.