ಕರಾವಳಿಸುಳ್ಯ

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಎದುರು ಧ್ವಜಾರೋಹಣ, ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅರಳಿದ ತಿರಂಗ

ನ್ಯೂಸ್ ನಾಟೌಟ್: ವೀರ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಎದುರು ಗುರುವಾರ ಧ್ವಜಾರೋಹಣ ನಡೆಸುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗಿಶ್ ಶೆಟ್ಟಿ ಆಗಮಿಸಿದ್ದರು. ಅಲ್ಲದೆ ಡಿ.ಬಿ. ಬಾಲಕೃಷ್ಣ, ಪೂರ್ಣಿಮಾ ಕೆ.ಎಂ, ಸುಂದರ್ ಗೌಡ, ಕೇಶವ ಗೌಡ, ಗರುದೇವ ಯು.ಬಿ, ಡಾ. ಸಚಿನ್ ನಡ್ಕ, ಕುಸುಮಾಧರ, ಸಾರಿಕಾ ಸುರೇಶ್, ನವೀನ್ ಚಿಲ್ಪಾರ್, ರಾಮಚಂದ್ರ ಕೆ, ವಾಸುದೇವ ವಕೀಲರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಒಕ್ಕಲಿಗರ ಗೌಡ ಸೇವಾ ಸಂಘದ ಪದಾದಿಕಾರಿಗಳು , ನಿರ್ದೇಶಕರು, ಮಹಿಳಾ ಘಟಕದ ಹಾಗೂ ಯುವ ಘಟಕದ ಪದಾದಿಕಾರಿಗಳು ನಿರ್ದೇಶಕರು ಮತ್ತು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಪದಾದಿಕಾರಿಗಳು, ನಿರ್ದೇಶಕರು ಬಾಗವಹಿಸಿದ್ದರು. ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪುತ್ತಿಲ ಸ್ವಾಗತಿಸಿದರು. ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಪ್ರಸ್ತಾವಿಕವಾಗಿ ಮಾತನಾಡಿದರು. ಕಿರಣ್ ಹೊಸಳಿಕೆ ಧನ್ಯವಾದ ಸಲ್ಲಿಸಿದರು. ಮೊನಪ್ಪ ಗೌಡ ದ್ವಜಾರೋಹಣ ಕಾರ್ಯಕ್ರಮ ನಿರ್ವಹಿಸಿದರು . ಕು|ದಕ್ಷಾ ಸಾಂತಪ್ಪ ಪ್ರಾರ್ಥಿಸಿದರು , ಇಂದ್ರಾವತಿಯವರು ಕಾರ್ಯಕ್ರಮ ನಿರೂಪಿಸಿದರು.

Related posts

ಸುಳ್ಯ: ಡಿ.4ರಂದು ‘ಪಂಚಾಯತ್ ರಾಜ್ ಸಮಾವೇಶ’ ಆಯೋಜನೆ, ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ಹೇಳಿದ್ದೇನು..?

ಫಾಜಿಲ್ ಹತ್ಯೆ ಪ್ರಕರಣ: ಬಂಧಿತ ಬಿಚ್ಚಿಟ್ಟ ಸ್ಫೋಟಕ ಹೆಸರು

ಸುಳ್ಯ: ಅರಂತೋಡು ಬಳಿ ಸರಣಿ ಅಪಘಾತ,ಕಾರು ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು