ಕ್ರೀಡೆ/ಸಿನಿಮಾವೈರಲ್ ನ್ಯೂಸ್

IND vs PAK world cup 2023: ನಾಳಿನ ಭಾರತ -ಪಾಕಿಸ್ಥಾನ ಹೈವೋಲ್ಟೆಜ್ ಪಂದ್ಯಕ್ಕೆ 4 ಐಜಿ, 21 ಡಿಸಿಪಿ, 7 ಸಾವಿರ ಪೊಲೀಸ್ ನಿಯೋಜನೆ, ನರೇಂದ್ರ ಮೋದಿ ಸ್ಟೇಡಿಯಂಗೆ ಇಷ್ಟೊಂದು ಬಿಗಿ ಭದ್ರತೆ ಏಕೆ..?

175

ನ್ಯೂಸ್ ನಾಟೌಟ್: ಅಹಮದಾಬಾದ್​ ನಗರದ ಸುತ್ತ ಈಗ ಕ್ರಿಕೆಟ್ ಜ್ವರ..ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ -ಪಾಕ್ ಮಹಾಮುಖಾಮುಖಿಯ ಕೌತುಕ. ಎರಡೂ ತಂಡಗಳು ಏಳು ವರ್ಷದ ಬಳಿಕ ಮಹತ್ವದ ಕೂಟವೊಂದರಲ್ಲಿ ಎದುರಾಗುತ್ತಿವೆ. ಈ ಹೊತ್ತಿನಲ್ಲಿ ಗೆಲುವು ಯಾರಿಗೆ ಅನ್ನುವ ಕುತೂಹಲ ಒಂದು ಕಡೆಯಾದ್ರೆ ಮತ್ತೊಂದು ಕಡೆ ಬಿಗಿ ಭದ್ರತೆಯದ್ದೇ ಚರ್ಚೆ. ಈ ಒಂದು ಪಂದ್ಯಕ್ಕೆ ಭಾರಿ ಭದ್ರತೆಯನ್ನು ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವರದಿ ಇಲ್ಲಿದೆ ಓದಿ.

ಇದೀಗ ನಿರೀಕ್ಷೆಗಿಂತಲೂ ಹೆಚ್ಚು ಫ್ಯಾನ್ಸ್​ ಪಂದ್ಯ ವೀಕ್ಷಿಸಲು ಅಹ್ಮದಾಬಾದ್​ ನಗರಕ್ಕೆ ಬಂದಿದ್ದಾರೆ. ಎರಡೂ ತಂಡಗಳು ಆಟಗಾರರು ಸ್ಥಳವನ್ನ ತಲುಪಿದ್ದು ಪಂದ್ಯಕ್ಕೆ ಅಣಿಯಾಗುತ್ತಿದ್ದಾರೆ. ಈಗ ಸುರಕ್ಷಿತವಾಗಿ ಪಂದ್ಯವನ್ನು ಆಯೋಜಿಸುವ ಜವಾಬ್ದಾರಿ ಬಿಸಿಸಿಐ ಹೆಗಲಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಬಿಸಿಸಿಐ, ಗುಜರಾತ್​​ ಸರ್ಕಾರ ಹಾಗೂ ರಾಜ್ಯ ಪೊಲೀಸ್​ ಇಲಾಖೆಯ ಸಹಾಯಹಸ್ತ ಕೋರಿದೆ. ಸದ್ಯ ಬಿಗಿ ಬಂದೋಬಸ್ತ್​​ ಕೈಗೊಳ್ಳಲು ಪೊಲೀಸ್​ ಇಲಾಖೆ, ಕೇಂದ್ರ ರಕ್ಷಣಾ ಇಲಾಖೆ ಜಂಟಿಯಾಗಿ ಅಖಾಡಕ್ಕಿಳಿದಿವೆ.

ಇಂಡೋ-ಪಾಕ್​ ಪಂದ್ಯಕ್ಕೆ ಹೈ ಸೆಕ್ಯೂರಿಟಿ ಕಲ್ಪಿಸೋ ನಿಟ್ಟಿನಲ್ಲಿ ಗುಜರಾತ್​ ಸಿಎಂ ಭೂಪೆಂದ್ರ ಪಟೆಲ್​ ಹಾಗೂ ಹೋಮ್​ ಮಿನಿಸ್ಟರ್​ ಹರ್ಷ್​ ಸಂಗ್ವಿ ವಿಶೇಷ ಸಭೆ ನಡೆಸಿದ್ದಾರಂತೆ. ಈ ಸಭೆಯಲ್ಲಿ ಪೊಲೀಸ್​ ಇಲಾಖೆ ಉನ್ನತ ಮಟ್ಟ ಅಧಿಕಾರಿಗಳು ಕೂಡ ಭಾಗಿಯಾಗಿದ್ದು, ಪೊಲೀಸ್​ ಸಿಬ್ಬಂದಿ ನಿಯೋಜನೆ, ಸೂಕ್ಷ್ಮ ಪ್ರದೇಶ ಮೇಲೆ ಕಣ್ಗಾವಲು ಸೇರಿದಂತೆ ಹಲವು ಚರ್ಚೆ ನಡೆಸಿ ಪ್ರಮಖ ನಿರ್ಧಾರ ಕೈಗೊಂಡಿದ್ದಾರೆ.

ಕ್ರೀಡಾಂಗಣದ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ. 4 ಐಜಿ & ಡಿಜಿಗಳು, 21 ಡಿಸಿಪಿಗಳು, 3 ಆ್ಯಂಟಿ ಡ್ರೋನ್​ ಟೀಮ್​ ,9 ಬಾಂಬ್​ ನಿಷ್ಕ್ರಿಯ ದಳ, 7 ಸಾವಿರಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿ, 4000 ಹೋಮ್​ ಗಾರ್ಡ್​​ ನಿಯೋಜನೆ, ಸಶಸ್ತ್ರ ಮೀಸಲು ಪಡೆಯ 13 ತಂಡ, SDRF ಹಾಗೂ NDRF​ ಸಿಬ್ಬಂದಿಯನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

https://www.youtube.com/watch?v=fId9Dakdix0
See also  ರಾತ್ರಿ ದಂಪತಿ ಮಧ್ಯೆ ಜಗಳ..! 3 ಮಕ್ಕಳಿಗೆ ತಂಪು ಪಾನೀಯಕ್ಕೆ ಕ್ರಿಮಿನಾಶಕ ಸೇರಿಸಿ ಕುಡಿಸಿದ ತಾಯಿ..! ಮುಂದೇನಾಯ್ತು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget