Latestರಾಜ್ಯವಿಡಿಯೋವೈರಲ್ ನ್ಯೂಸ್

ಪಶು ಆಸ್ಪತ್ರೆಗೆ ತಾನೇ ಬಂದು ವೈದ್ಯರಿಂದ ಚಿಕಿತ್ಸೆ ಪಡೆದ ಮಂಗ..! ಅಚ್ಚರಿ ಮೂಡಿಸಿದ ಕೋತಿಯ ವರ್ತನೆ..! ಇಲ್ಲಿದೆ ವಿಡಿಯೋ

1.2k

ನ್ಯೂಸ್‌ ನಾಟೌಟ್: ಮಂಗಗಳು ಮನುಷ್ಯರಷ್ಟೇ ಬುದ್ಧಿಜೀವಿಗಳು ಎನ್ನುವುದಕ್ಕೆ ಬಾಗಲಕೋಟೆಯ ಘಟನೆಯೊಂದು ಸಾಕ್ಷಿಯಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಂಗ, ಚಿಕಿತ್ಸೆಗಾಗಿ ತಾನೇ ನೇರವಾಗಿ ಪಶು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಪಶುವೈದ್ಯರ ಬೈಕ್ ​ನ ಮೇಲೇರಿ ಮಂಗ ಗಾಯವಾಗಿರುವ ಸ್ಥಳ ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲೆ ಇಲಕಲ್ ತಾಲೂಕಿನ ಗುಡೂರ ಗ್ರಾಮದ ಪಶು ಆಸ್ಪತ್ರೆ. ಈ ಗ್ರಾಮದಲ್ಲಿ ಕೋತಿಯೊಂದು ತನ್ನ ಬಾಲದ ಕೆಳಭಾಗದಲ್ಲಿ ಗಾಯವಾಗಿ ತೀವ್ರ ನೋವಿನಿಂದ ಬಳಲುತ್ತಿತ್ತು. ತನ್ನ ನೋವಿಗೆ ಪರಿಹಾರ ಕಂಡುಕೊಳ್ಳಲು ಚಿಕಿತ್ಸೆಗಾಗಿ ಪಶು ಆಸ್ಪತ್ರೆ ಬಳಿ ಬಂದಿದೆ. ಇದನ್ನು ಗಮನಿಸಿದ ಸಿಬ್ಬಂದಿ ವೈದ್ಯರನ್ನು ಕರೆದಿದ್ದಾರೆ. ಸ್ಥಳದಲ್ಲೇ ಇದ್ದ ಪಶುವೈದ್ಯಕೀಯ ಪರಿವೀಕ್ಷಕ ಜಿ.ಜಿ.ಬಿಲ್ಲೊರ ಮಂಗನಿಗೆ ಚಿಕಿತ್ಸೆ ನೀಡಿದ್ದಾರೆ.

“ಹೊರಗಡೆ ಬೈಕ್​ ನಿಲ್ಲಿಸಿದ್ದೆ, ಅದರಲ್ಲಿ ಚಿಕಿತ್ಸೆಗೆ ಬಳಸುವ ಬ್ಯಾಗ್ ​ಕೂಡ ಇಟ್ಟದ್ದೆ. ಏಕಾಏಕಿ ಒಂದು ಮಂಗ ಬಂದು ಬೈಕ್​ ಮೇಲೆ ಕುಳಿತುಕೊಂಡಿತು. ನಂತರ ಮಲಗಿತು. ಯಾಕೆ ಹೀಗೆ ಮಾಡ್ತಿದೆ ಎಂದು ನೋಡಿದ್ರೆ, ಅದೇ ತನಗೆ ಗಾಯವಾಗಿರುವುದನ್ನು ಸನ್ನೆ ಮಾಡಿ ತೋರಿಸಿತು. ಎಲ್ಲಿ ಗಾಯವಾಗಿದೆ ಎಂದು ನೋಡಿದರೆ, ಗುದದ್ವಾರದ ಬಳಿ, ಗಾಯದಲ್ಲಿ ಹುಳ ಬಿದ್ದಿರುವಂತೆ ಕಂಡಿತು. ಅದಕ್ಕೆ ಬೇಕಾದ ಔಷಧೋಪಚಾರವನ್ನು ಮಾಡಿದ್ದೇನೆ. ಚಿಕಿತ್ಸೆ ಪೂರ್ತಿಯಾಗುವವರೆಗೆ ಮಂಗ ತಾನಾಗೆ ಅಡ್ಡ ಮಲಗಿ ಸಹಕಾರ ನೀಡಿದೆ. ಮರದ ಮೇಲ್ಗಡೆ ಇನ್ನಷ್ಟು ಮಂಗಗಳಿದ್ದವು. ಅವುಗಳು ಇವೆಲ್ಲವನ್ನೂ ಗಮನಿಸುತ್ತಿದ್ದವು. ಆದರೆ, ಅದ್ಯಾವುದೂ ನನಗೆ ತೊಂದರೆ ಕೊಟ್ಟಿಲ್ಲ. ಮೂಕಪ್ರಾಣಿ ಜಾನುವಾರುಗಳಿಗೆ ನಾನು ಚಿಕಿತ್ಸೆ ನೀಡಿದ್ದೇನೆ. ಆದರೆ ಈಗ ಆಂಜನೇಯ ಸ್ವರೂಪಿಯಾದ ಮಂಗ, ತಾನೇ ಸ್ವತಃ ಬಂದು ನನ್ನಿಂದ ಚಿಕಿತ್ಸೆ ಪಡೆದಿದೆ. ಹಾಗಾಗಿ ನಾನೂ ಪುಣ್ಯವಂತ ಅಂತ ಭಾವಿಸಿದ್ದೇನೆ” ಎಂದು ವೈದ್ಯ ಜಿ.ಜಿ.ಬಿಲ್ಲೊರ ಹೇಳಿಕೊಂಡಿದ್ದಾರೆ.

See also  ಮತ್ತೆ ಸದ್ದು ಮಾಡುತ್ತಿರುವ ಮಥುರಾ ಕೃಷ್ಣ ಜನ್ಮಭೂಮಿ ವಿವಾದ..! ಮಸೀದಿ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget