ಕ್ರೈಂದೇಶ-ಪ್ರಪಂಚ

ಮಲವಿಸರ್ಜನೆ ವೇಳೆ ದೇಹದೊಳಗೆ ಹಾವು ಪ್ರವೇಶಿಸಿದೆ ಎಂದ ವ್ಯಕ್ತಿ! ಇಲ್ಲಿದೆ ವೈದ್ಯರೇ ಬೆಚ್ಚಿಬಿದ್ದ ಘಟನೆ!

ನ್ಯೂಸ್ ನಾಟೌಟ್ : ಖಾಸಗಿ ಅಂಗದ ಮೂಲಕ ತನ್ನ ದೇಹದೊಳಗೆ ಹಾವು ಪ್ರವೇಶಿಸಿದೆ ಎಂದು ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದೆ.

ಮಹೇಂದ್ರ ಎಂಬ ವ್ಯಕ್ತಿ ಹರ್ದೋಯಿ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಹೊಟ್ಟೆ ನೋವೆಂದು ಮದ್ಯರಾತ್ರಿ ಬಂದ ವೇಳೆ ವೈದ್ಯರು ಏನಾಯಿತು ಹೇಗೆ ಹೊಟ್ಟೆ ನೋವೆಂದು ಕೇಳಿದಾಗ ತಾನು ಮಲವಿಸರ್ಜನೆ ಮಾಡುವ ವೇಳೆಯಲ್ಲಿ ತನ್ನ ಖಾಸಗಿ ಅಂಗದ ಮೂಲಕ ಹಾವು ದೇಹದೊಳಗೆ ಪ್ರವೇಶ ಮಾಡಿದೆ ಎಂದಿದ್ದಾನೆ.

ಕೂಡಲೇ ವೈದ್ಯರು ಶಾಕ್‌ ಆಗಿ ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಅವರಿಗೆ ಹಾವಿನ ಕುರುಹು ಆಗಲಿ, ಅದರ ಕಡಿತದ ಕುರುಹು ಆಗಲಿ ಪತ್ತೆಯಾಗಿಲ್ಲ. ಆದರೆ ಈ ಮಾತನ್ನು ಮಹೇಂದ್ರರ ಕುಟುಂಬದವರು ಕೇಳದೇ ಮತ್ತೊಮ್ಮೆ ಪರೀಕ್ಷೆ ಮಾಡಿಸಲು ಬೇರೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲೂ ಕೂಡ ಇದೇ ರೀತಿಯ ಮಾತನ್ನು ವೈದ್ಯರು ಹೇಳಿದ್ದಾರೆ.

ಪರೀಕ್ಷೆ ಮಾಡಿದ ಬಳಿಕ ʼಈ ವ್ಯಕ್ತಿಗೆ ವಿಪರೀತ ಡ್ರಗ್ಸ್‌ ಸೇವಿಸಿದ ಪರಿಣಾಮ ಹೊಟ್ಟೆ ನೋವಾಗಿದೆ. ಡ್ರಗ್ಸ್‌ ನ ಅಮಲಿನಲ್ಲೇ ಮನೆಯವರ ಬಳಿ ವ್ಯಕ್ತಿ ಹಾವಿನ ವಿಚಾರವನ್ನು ಹೇಳಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸಿಟಿ ಸ್ಕ್ಯಾನ್‌ ಮಾಡಿದ ಬಳಿಕ ಇದು ಡ್ರಗ್ಸ್‌ ನ ಪ್ರಭಾವವೆಂದು ತಿಳಿದು ಬಂದಿದೆ. ಆತನನ್ನು ಡಿಸ್ಚಾರ್ಜ್‌ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Related posts

ಗಂಡನನ್ನೇ ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಂದ ಪತ್ನಿ..! 11 ತಿಂಗಳ ಬಳಿಕ ಬಯಲಾಯ್ತು ಕೊಲೆಯ ರಹಸ್ಯ..!

ಗಗನಸಖಿ ನೀಡುತ್ತಿದ್ದ ಆಹಾರ ನಿರಾಕರಿಸಿದ ಮೂವರು ಪ್ರಯಾಣಿಕರು ಅರೆಸ್ಟ್..! ವಿಚಿತ್ರ ವರ್ತನೆಯಿಂದ ಅನುಮಾನಗೊಂಡ ಗಗನಸಖಿ ಮಾಡಿದ್ದೇನು..?

ಹಿರಿಯ ನಟಿ ಪದ್ಮಜಾ ರಾವ್​ ಗೆ ಮೂರು ತಿಂಗಳು ಜೈಲು ಶಿಕ್ಷೆ..! ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ನಟಿ ವಿರುದ್ಧ ಮಂಗಳೂರಿನ ನ್ಯಾಯಾಲಯದಿಂದ ಆದೇಶ..!