ಕ್ರೈಂದೇಶ-ಪ್ರಪಂಚ

18000ಕ್ಕೂ ಹೆಚ್ಚು ಹಸುಗಳನ್ನು ಬಲಿ ಪಡೆದ ಭೀಕರ ಸ್ಪೋಟ! ಕಾರಣ ನಿಗೂಢವಾಗಿಟ್ಟ ಜಮೀನು ಮಾಲೀಕ!

ನ್ಯೂಸ್ ನಾಟೌಟ್ :  ಅಮೇರಿಕಾದ ಟೆಕ್ಸಾಸ್‌ನಲ್ಲಿ ಕುಟುಂಬ ಡೈರಿ ಫಾರ್ಮ್ ಸೌತ್‌ಫೋರ್ಕ್ ಡೈರಿ ಫಾರ್ಮ್‌ನಲ್ಲಿ ಮಂಗಳವಾರ ಸ್ಫೋಟ ಮತ್ತು ಬೆಂಕಿ ಸಂಭವಿಸಿದ ನಂತರ 18,000 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿರುವುದಾಗಿ ಶುಕ್ರವಾರ ಸಾವಿನ ಸಂಖ್ಯೆ ದೃಢಪಡಿಸಲಾಗಿದೆ.

ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಜಮೀನಿನ ಮಾಲೀಕತ್ವದ ಕುಟುಂಬವು ಘಟನೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

ಕ್ಯಾಸ್ಟ್ರೋ ಕೌಂಟಿ ಶೆರಿಫ್‌ನ ಕಛೇರಿಯಲ್ಲೂ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಉರಿಯುತ್ತಿರುವ ಕಟ್ಟಡದೊಳಗೆ ಸಿಲುಕಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗಾಗಿ ಜಮೀನಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿತ್ತು.

2013 ರಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಟೆಕ್ಸಾಸ್ ಫಾರ್ಮ್‌ನಲ್ಲಿನ ಬೆಂಕಿಯು ಜಾನುವಾರುಗಳನ್ನು ಒಳಗೊಂಡಂತೆ ಬೆಂಕಿಯಲ್ಲಿ ಮೇವುಗಳು ಸೇರಿ ಕೊಟ್ಟಿಗೆಗಳು ಸುಟ್ಟು ಕರಕಲಾಗಿವೆ. ಕಳೆದ ದಶಕದಲ್ಲಿ ಸುಮಾರು 6.5 ಮಿಲಿಯನ್ ಕೃಷಿ ಪ್ರಾಣಿಗಳು ಇಂತಹ ಬೆಂಕಿಯಲ್ಲಿ ಸಾವನ್ನಪ್ಪಿವೆ, ಅವುಗಳಲ್ಲಿ ಹೆಚ್ಚಿನವು ಕೋಳಿ ಎಂದು ದಾಖಲೆಗಳು ಬಹಿರಂಗಪಡಿಸಿವೆ.

Related posts

ರಾಯ್​ ಬರೇಲಿ, ವಯನಾಡ್ ಎರಡರಲ್ಲಿ ರಾಹುಲ್ ಆಯ್ಕೆ ಯಾವುದು..? ಈ ಬಗ್ಗೆ ಕಾಂಗ್ರೆಸ್ ತೀರ್ಮಾನವೇನು..?

ಬಲಿಕೊಟ್ಟ ಮೇಕೆ ಮಾಂಸ ತಿನ್ನುವಾಗಲೇ ಹೋಯಿತು ವ್ಯಕ್ತಿಯ ಪ್ರಾಣಪಕ್ಷಿ,ಘಟನೆಗೆ ಕಾರಣವೇನು?

ದರ್ಶನ್ ಜೊತೆಗಿದ್ದ ವಿಲ್ಸನ್​ ಗಾರ್ಡನ್​ ನಾಗ ಮತ್ತು ಸಹಚರರ 18 ಮೊಬೈಲ್ ಮತ್ತು ಡ್ರಗ್ಸ್ ​ ವಶಕ್ಕೆ..! ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮತ್ತೆ ಸಿಸಿಬಿ ದಾಳಿ..!