ಕ್ರೈಂವೈರಲ್ ನ್ಯೂಸ್

ದಂಪತಿಯಿಂದ ನಿಗೂಢ ಕಲೆಗಳ ಅಭ್ಯಾಸದ ಶಂಕೆ! ಮರಕ್ಕೆ ನೇತು ಹಾಕಿ ಬೆತ್ತದಿಂದ ಹೊಡೆದ ಗ್ರಾಮಸ್ಥರು! ಏನಿದು ವಿಚಿತ್ರ ಘಟನೆ?

193

ನ್ಯೂಸ್ ನಾಟೌಟ್: ದಂಪತಿಗಳು ನಿಗೂಢವಾಗಿ ತಾಂತ್ರಿಕ ಮತ್ತು ಇತರ ರಹಸ್ಯ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಇವರನ್ನು ಮರಕ್ಕೆ ನೇತು ಹಾಕಿ ಬೆತ್ತದಿಂದ ಹೊಡೆದ ಘಟನೆ ಸೋಮವಾರ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಸಂಗಾರೆಡ್ಡಿ ಜಿಲ್ಲೆಯ ಕೊಲ್ಕುರು ಗ್ರಾಮದಲ್ಲಿ ನಿಗೂಢ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ ದಂಪತಿಗಳ ಮೇಲೆ ಜನರು ಹಲ್ಲೆ ನಡೆಸಿದ್ದಾರೆ. ಶ್ಯಾಮಮ್ಮ ಮತ್ತು ಯಾದಯ್ಯ ಎಂಬ ದಂಪತಿಗಳನ್ನು ಜನರು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ.

ಘಟನೆಯ ಬಗ್ಗೆ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಇಬ್ಬರನ್ನು ರಕ್ಷಿಸಿದ್ದಾರೆ. ದಂಪತಿಗಳಿಬ್ಬರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

See also  5 ಕೆ.ಜಿ 'ಬಟಾಟೆ' ಲಂಚ ಕೇಳಿ ಸಿಕ್ಕಿಬಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್..!, ಅಬ್ಬಾ...ಆಲೂಗೆಡ್ಡೆ ಇಷ್ಟೊಂದು ಡಿಮ್ಯಾಂಡ್ ಆಗಿದ್ದು ಹೇಗೆ..? ಏನಿದು ರಿಯಲ್ ಸ್ಟೋರಿ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget