ಕ್ರೈಂ

ವಿವಾಹಿತನ ಜೊತೆ ಪ್ರೇಮ ಪ್ರಕರಣ, ಅತ್ಯಾಚಾರ! ಖಾಸಗಿ ಭಾಗಕ್ಕೆ ಮೆಣಸಿನ ಪುಡಿ ಹಾಕಿ ವಿಕೃತಿ!

325

ನ್ಯೂಸ್ ನಾಟೌಟ್ :  ವಿವಾಹಿತ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮೇಲೆ ಅತ್ಯಾಚಾರ ಎಸಗಿ, ದೈಹಿಕವಾಗಿ ಹಲ್ಲೆ ಮಾಡಿದ ಆರೋಪದ ಮೇಲೆ ಸೂರತ್‌ನಲ್ಲಿ ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯು ಆಕೆಯ ಖಾಸಗಿ ಭಾಗಗಳಲ್ಲಿ ಮೆಣಸಿನಪುಡಿಯನ್ನು ತುಂಬಿದ್ದರಿಂದ ಸಂತ್ರಸ್ಥೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ವರದಿ ತಿಳಿಸಿದೆ.

ಆರೋಪಿ ನಿಕುಂಜ್ ಕುಮಾರ್ ಅಮೃತ್ ಭಾಯ್ ಪಟೇಲ್ ತನಗೆ ವಿವಾಹವಾಗಿದೆ ಮತ್ತು ತನ್ನ ಪತ್ನಿ ಬೇರೆ ಗ್ರಾಮದಲ್ಲಿ ವಾಸಿಸುತ್ತಿರುವುದನ್ನು ಮುಚ್ಚಿಟ್ಟು ಈಕೆಯ ಜೊತೆ ಗೆಳೆಯನಂತೆ ಸಲುಗೆ ಹೊಂದಿದ್ದ ಎನ್ನಲಾಗಿದೆ. ಈ ನೆಪದಲ್ಲಿ, ಅವನು ಸಂತ್ರಸ್ತೆಯೊಂದಿಗೆ ಸಂಬಂಧವನ್ನು ಬೆಳೆಸಿದ್ದಾನೆ ಎಂದು ವರದಿ ತಿಳಿಸಿದೆ.

ಪೊಲೀಸರ ಪ್ರಕಾರ, ಆರೋಪಿಗೆ ಮದುವೆ ಆಗಿರುವ ವಿಷಯ ತಿಳಿಯುತ್ತಿದ್ದಂತೆ ಸಂತ್ರಸ್ತೆ ಪಟೇಲ್‌ನೊಂದಿಗೆ ಜಗಳವಾಡಿ ಅವನಿಂದ ದೂರವಾಗಲು ನಿರ್ಧರಿಸಿದಳು. ಆಕೆಯ ನಿರ್ಧಾರದಿಂದ ಕೋಪಗೊಂಡ ಪಟೇಲ್ ಆಕೆಗೆ ಕೇಬಲ್ ವೈರ್‌ನಿಂದ ಹೊಡೆದು ಅತ್ಯಾಚಾರವೆಸಗಿದ್ದಾನೆ.

ಬಳಿಕ ಆಕೆಯ ಖಾಸಗಿ ಭಾಗಕ್ಕೆ ಮೆಣಸಿನಪುಡಿಯನ್ನು ತುಂಬಿಸಿದ್ದಾನೆ. ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತೀವ್ರವಾದ ಗಾಯಗಳಿಂದಾಗಿ ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಈ ಹಿನ್ನೆಲೆಯಲ್ಲಿ ಓಲಪಾಡ್ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಐಪಿಸಿ 376ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

See also  ಪವಿತ್ರಾ ಮನೆಯಿಂದ ನಟ ದರ್ಶನ್ ಒಳ ಉಡುಪು, ಹೇರ್ ಸ್ಯಾಂಪಲ್ ಅನ್ನು ವಶಕ್ಕೆ ಪಡೆದ ಪೊಲೀಸರು..!, ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿದ ನಟನಿಗೆ ಮತ್ತೆ ಸಂಕಷ್ಟ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget