ದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ಚಲಿಸುತ್ತಿದ್ದ ಬೈಕ್ ನಲ್ಲಿ ಜೋಡಿಗಳ ರೊಮ್ಯಾನ್ಸ್ ! ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ನಾವು ಪ್ರತೀ ದಿನ ಒಂದಿಲ್ಲೊಂದು ವೈರಲ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತೇವೆ. ಅಲ್ಲದೆ ಬೈಕ್ ನಲ್ಲಿ ವಿಚಿತ್ರ ಸ್ಟಂಟ್ ಮಾಡುವ ವಿಡಿಯೋಗಳನ್ನು ಕೂಡಾ ನೀವು ನೋಡಿರಬಹುದು . ಇದರ ಜೊತೆಗೆ ಇತ್ತೀಚೆಗೆ ಪ್ರೇಮಿಗಳು ಬೈಕ್ ನಲ್ಲಿ ವಿಚಿತ್ರ ಸಾಹಸಕ್ಕೆ ಮುಂದಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆಗಳ ಆಗಾಗ ವರದಿಯಾಗುತ್ತಿರುತ್ತವೆ. ಅಂತಹದ್ದೆ ಘಟನೆಯೊಂದು ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ.

ಚಲಿಸುತ್ತಿದ್ದ ಬೈಕಿನಲ್ಲಿ ಜೋಡಿಯೊಂದು ರೊಮ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ,ಪೊಲೀಸರು ಸವಾರನ ವಿರುದ್ದ ಪ್ರಕರಣ ದಾಖಲಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.

ಅಜ್ಮೀರಿನ ಸಾಹಿಲ್ ಎಂಬ ಬೈಕ್ ಸವಾರನು ತನ್ನ ಹೆಂಡತಿಯನ್ನು ತಡ ರಾತ್ರಿ ಬೈಕ್ ನ ಮುಂಭಾಗದಲ್ಲಿ ಕುಳ್ಳಿರಿಸಿ ರೋಡಿನಲ್ಲೇ ರೊಮ್ಯಾನ್ಸ್ ಮಾಡುತ್ತಾ ಜೋಲಿ ರೈಡಿನಲ್ಲಿದ್ದ ವೇಳೆ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೋ ಸಾಮಾಜಿಕತಾಣದಲ್ಲಿ ವೈರಲ್ ಆಗಿದ್ದು, ಠಾಣಾಧಿಕಾರಿ ಕರುಣ್ ಸಿಂಗ್ ಖಂಗರೋಟ್ ಅದನ್ನು ಗಮನಿಸಿದ್ದಾರೆ.

ಈ ಜೋಡಿಗಳ ಹುಚ್ಚು ಸಾಹಸಕ್ಕೆ ಕ್ರಿಶ್ಚಿಯನ್ ಗಂಜ್ ಠಾಣೆ ಪೊಲೀಸರು ದಂಪತಿಗಳ ವಿರುದ್ದ ಐಪಿಸಿ ಸೆಕ್ಷನ್ 336 (ಜೀವಕ್ಕೆ ಕುತ್ತು), ಸೆಕ್ಷನ್ 279 ( ನಿರ್ಲಕ್ಷ್ಯದ ಕೃತ್ಯ) ಮತ್ತು 294 ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ ಎಸಗುವ ಕಾಯ್ದೆಗಳಿಗೆ ಸಂಬಂದಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

Related posts

ಡಿಸಿಎಂ ಗೆ 50 ಸಾವಿರ ರೂಪಾಯಿ ದಂಡ..! ಬಿಬಿಎಂಪಿ ಡಿಕೆ ಶಿವಕುಮಾರ್ ಗೆ ದಂಡ ವಿಧಿಸಿದ್ದೇಕೆ?

ಲಕ್ಷದ್ವೀಪದಲ್ಲಿ ಶಾಖೆ ತೆರೆದ ಮೊದಲ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ, ಇಂದಿನಿಂದ(ಎ.10) ಕಾರ್ಯಾರಂಭ

ಟರ್ಕಿ, ಸಿರಿಯಾ ಭಯಾನಕ ಭೂಕಂಪನದಿಂದ 4000 ದಾಟಿದ ಸಾವಿನ ಸಂಖ್ಯೆ