ಕ್ರೈಂವಿಡಿಯೋ

ಸ್ನೇಹಿತನ ಜೊತೆ ಬಿಎಂಡಬ್ಲ್ಯೂ ಕಾರಿನಲ್ಲಿ ಪ್ರಯಾಣ! ಟ್ರಕ್​ಗೆ ಡಿಕ್ಕಿ, ಗಗನಸಖಿಯ ದುರಂತ ಅಂತ್ಯ! ಇಲ್ಲಿದೆ ಅಪಘಾತದ ವಿಡಿಯೋ!

ನ್ಯೂಸ್ ನಾಟೌಟ್ :  ವೈಯಕ್ತಿಕ ಕೆಲಸಕ್ಕಾಗಿ ದೆಹಲಿಯಿಂದ ಮುಂಬೈಗೆ ಬಂದಿದ್ದ ಗಗನಸಖಿಯೊಬ್ಬರು ಅಪಘಾತವೊಂದರಲ್ಲಿ ಸಾವನ್ನಪ್ಪಿದ ಘಟನೆ ಮುಂಬೈಯಲ್ಲಿ ನಡೆದಿದೆ. ಅಪಘಾತದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು. ಆಕೆಯ ಸ್ನೇಹಿತ ಕುಡಿದ ಅಮಲಿನಲ್ಲಿ ಬಿಎಂಡಬ್ಲ್ಯೂ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ನಿಯಂತ್ರಣ ತಪ್ಪಿ ಬಿಎಂಸಿ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ.

ಮುಂಬೈನ ಜುಹು ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೃತರನ್ನು ಪಲ್ಲವಿ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ, ಅವರು ದೆಹಲಿ ನಿವಾಸಿಯಾಗಿದ್ದು, ಮೂಲತಃ ಪಶ್ಚಿಮ ಬಂಗಾಳದ ಕೋಲ್ಕತ್ತಾದವರು. ಅವರು ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಕೆಲಸ ಬದಲಾಯಿಸಿ ಬೇರೊಂದು ವಿಮಾನ ಕಂಪನಿಗೆ ಸೇರ್ಪಡೆಯಾಗಿದ್ದರು. ಲೇಸರ್ ಸರ್ಜರಿಗಾಗಿ ಮುಂಬೈಗೆ ಬಂದಿದ್ದರು ಎನ್ನಲಾಗಿದೆ. ಯುವಕ 120 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ವರದಿ ತಿಳಿಸಿದೆ.

ಅರ್ಧವ್ಯು ಎಂಬುವವರು ಪಲ್ಲವಿಯ ಸ್ನೇಹಿತನಾಗಿದ್ದು,  ಭಾರತಿ ದಿಲ್​ಪ್ರಸಾದ್ ರೈ ಹಾಗೂ ಅಂಕಿತ್ ನರೇಂದ್ರ ಖರೆ ಎಂಬುವವರ ಜತೆ ರೆಸ್ಟೊರೆಂಟ್ ನ ಬಾರ್​ಗೆ ತೆರಳಿದ್ದರು.ಬೆಳಗಿನ ಜಾವ ಸುಮಾರು 2.30ರ ಸಮಯದಲ್ಲಿ ಬಾಂದೇಕರ್ ಅವರ ತಾಯಿಯ ಬಿಎಂಡಬ್ಲ್ಯೂ ಕಾರಿನಲ್ಲಿ ಹಿಂದಿರುಗುತ್ತಿದ್ದರು, ಕುಡಿದು ಚಾಲನೆ ಮಾಡುತ್ತಿದ್ದರು. ಕಾರು ಬಿಎಂಸಿ ಕಸದ ಲಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಎಲ್ಲರೂ ತೀವ್ರವಾಗಿ ಗಾಯಗೊಂಡಿದ್ದಾರೆ, ಪಲ್ಲವಿ ಭಟ್ಟಾಚಾರ್ಯ ಮೃತಪಟ್ಟಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Related posts

ಕಡಬ: ಕಾಡಿನೊಳಗಿಂದ ನೀರಿನಲ್ಲಿ ಹರಿದು ಬಂತು ಮಾನವನ ತಲೆಬುರುಡೆ

‘ಬಿಗ್ ಬಾಸ್’ ಗೆ ಮತ್ತೆ ಎಂಟ್ರಿ ಕೊಟ್ಟ ವರ್ತೂರು ಸಂತೋಷ್..? ಮುಂದೆ ಕಾನೂನು ಪ್ರಕ್ರಿಯೆಗಳೇನಿದೆ?

ಸಂಪಾಜೆ: ಕಾರು-ಪಿಕಪ್ ನಡುವೆ ಅಪಘಾತ, ಮಡಿಕೇರಿ ಕಡೆಯಿಂದ ಬರುತ್ತಿದ್ದ ಕಾರು ಪುಡಿ..ಪುಡಿ