ನ್ಯೂಸ್‌ನಾಟೌಟ್: ಮದುವೆಯಲ್ಲಿ ನಡೆದ ಅಸಮಾಧಾನಕ್ಕೆ ವ್ಯಕ್ತಿಯೊಬ್ಬ ತನ್ನ ಇಬ್ಬರೂ ಸಹೋದರರನ್ನೇ ಹತ್ಯೆಗೈದಿರುವ ಘಟನೆ ಛತ್ತೀಸ್‌ಗಢದ ಕಬೀರಧಾಮ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ತಿನ್ಹಾ, ಬೇಗ ಎಂಬ ವ್ಯಕ್ತಿಯ ಸಹೋದರರು ಮದುವೆ ಮನೆಯಲ್ಲಿ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದರು. ಈ ವೇಳೆ ಅವರ ಪಕ್ಕದಲ್ಲಿ ತಿನ್ಹಾ ಬೇಗ ಪತ್ನಿಯೂ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದರು. ತನ್ನ ಕಿರಿಯ ಸಹೋದರರು ತನ್ನ ಪತ್ನಿಯೊಂದಿಗೆ ನೃತ್ಯ ಮಾಡುತ್ತಿರುವುದನ್ನು ನೋಡಿದ ತಿನ್ಹಾ ಬೇಗ ಸಿಟ್ಟಿನಲ್ಲಿ ಸಹೋದರರ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದಾನೆ.
ಘಟನೆಯನ್ನು ತಡೆಯಲು ಬಂದ ಸಂಬಂಧಿಕರ ಮೇಲೂ ಹಲ್ಲೆಗೈದು ಗಂಭೀರ ಗಾಯಗೊಳಿಸಿದ್ದಾನೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿದ್ದ ತನ್ನ ಪತ್ನಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆಗೈದಿದ್ದಾನೆ. ಇದನ್ನು ಮೊದಲು ತಡೆಯಲು ಬಂದ ಕಿರಿಯ ಸಹೋದರರನ್ನು ಕೊಲೆ ಮಾಡಿದ್ದಾನೆ ಎಂದು ವರದಿ ತಿಳಿಸಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.