ಕರಾವಳಿಕ್ರೈಂ

ನೇಣು ಬಿಗಿದು ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ! ಆತಂಕದಲ್ಲಿ ಸ್ಥಳೀಯರು!

398

ನ್ಯೂಸ್ ನಾಟೌಟ್: ಮದ್ದಡ್ಕದ ಕಿನ್ನಗೋಳಿಯಲ್ಲಿ ಮಹಿಳೆಯ ಶವವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಮಾರ್ಚ್ 26ರಂದು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಸ್ಥಳೀಯರು ಕೆಲಸಕ್ಕೆ ಹೋಗುವಾಗ ಕೊಳೆತ ವಾಸನೆ ಬರುತ್ತಿದ್ದದ್ದು ಜನರ ಗಮನಕ್ಕೆ ಬಂದಿದ್ದು, ಏನೆಂದು ಪರಿಶೀಲಿಸಿದಾಗ ಸ್ವಲ್ಪ ದೂರದಲ್ಲಿ ಅಪರಿಚಿತ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶವದ ಗುರುತು ಪತ್ತೆಯಾಗದ ಸ್ಥಿತಿಯಲ್ಲಿ ಕೊಳೆತಿದ್ದು, ಈ ಅಪರಿಚಿತ ಶವದ ಬಗ್ಗೆ ಸ್ಥಳಿಯರಲ್ಲಿ ಆತಂಕ ಹೆಚ್ಚಾಗಿದೆ. ಒಂದು ತಿಂಗಳ ಹಿಂದೆಯೇ ಈ ಘಟನೆ ನಡೆದಿದೆ ಅನ್ನುವುದು ಬೆಳಕಿಗೆ ಬಂದಿದ್ದು, ಮಹಿಳೆಯು ಮಂಗಳೂರಿನಿಂದ ಗುರುವಾಯನಕೆರೆಗೆ ಮಾಡಿರುವ ಟಿಕೆಟ್ ಲಭ್ಯವಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯಂತೆ ಕಾಣುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

See also  ಪಿಡಿಒ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ..! ಸೀಲ್ ಓಪನ್ ಆಗಿರುವ ಪ್ರಶ್ನೆಪತ್ರಿಕೆಯ ಫೋಟೊ ವೈರಲ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget