ಕರಾವಳಿಕೊಡಗುಕ್ರೈಂ

ನಿವೃತ್ತ ಅರಣ್ಯಾಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ! ಡೆತ್ ನೋಟ್‌ನಲ್ಲಿತ್ತು ಅಸಲಿ ಕಾರಣ !

ನ್ಯೂಸ್ ನಾಟೌಟ್ : ಕೊಡಗಿನ ಹಲವಾರು ಕಡೆ ಅರಣ್ಯ ಇಲಾಖೆಯಲ್ಲಿ ರೇಂಜರ್ ಆಗಿ ಸೇವೆ ಸಲ್ಲಿಸಿದ್ದ ನಿವೃತ್ತ ಅರಣ್ಯಾಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ತಾಲ್ಲೂಕಿನ ಬಸವನತ್ತೂರಿನಲ್ಲಿ ನಡೆದಿದೆ.

ನಿವೃತ್ತ ಅರಣ್ಯಾಧಿಕಾರಿ ಟಿ.ವಿ. ಶಶಿ ಎಂಬವರು ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. 80 ವರ್ಷ ವಯಸ್ಸಿನ ಇವರು ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಅನಾರೋಗ್ಯಕ್ಕೆ ತುತ್ತಾದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು, ಆದ್ದರಿಂದ ನಿದ್ರಾಹೀನತೆ ಅವರನ್ನು ಕಾಡುತ್ತಿತ್ತು ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿದೆ.

Related posts

ಸುಳ್ಯ: ಕಾರು ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಪಘಾತ,ಕಾರು ಚಾಲಕನಿಗೆ ಗಾಯ

ಆಗುಂಬೆ ಘಾಟ್ ನಲ್ಲಿ ಬಸ್‌-ಬೈಕ್‌ ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಯುವತಿ ಗಂಭೀರ

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಐಟಿಐ ವಿದ್ಯಾರ್ಥಿ ಸಾವು