ಕ್ರೈಂವೈರಲ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಿಯರ್ ತುಂಬಿದ ಲಾರಿ, ಸಿಕ್ಕಿದ್ದೇ ಚಾನ್ಸು ಎಂದು ಸ್ಥಳಕ್ಕೆ ಧಾವಿಸಿದ ಎಣ್ಣೆ ಪ್ರಿಯರು !

ನ್ಯೂಸ್ ನಾಟೌಟ್ : ಎಣ್ಣೆ ಅಂದ್ರೆ ಸಾಕು ಕುಡುಕರ ಕಿವಿ ನೆಟ್ಟಗಾಗುತ್ತದೆ. ಮದ್ಯಪ್ರಿಯರು ಜಾಸ್ತಿಯಾದ ಕಾಲಘಟ್ಟದಲ್ಲಿಯೇ ಆಂಧ್ರಪ್ರದೇಶದಲ್ಲಿ ಬಿಯರ್ ಬಾಟಲಿ ತುಂಬಿದ ಟ್ರಕ್ಕೊಂದು ಪಲ್ಟಿಯಾಗಿ ಬಿದ್ದಿದೆ. ಅಪಘಾತದಲ್ಲಿ ವಾಹನಕ್ಕೇನಾಯ್ತು? ಚಾಲಕನಿಗೇನಾಯ್ತು ಅನ್ನೋದನ್ನು ಬಿಟ್ಟು ಸಿಕ್ಕಿದ್ದೇ ಚಾನ್ಸ್ ಎಂದು ಜನ ಮುಗಿಬಿದ್ದು ಕೈಗೆ ಸಿಕ್ಕಷ್ಟು ಬಿಯರ್ ಬಾಟಲಿ ಎತ್ತಿಕೊಂಡು ಪರಾರಿಯಾದ ಘಟನೆ ನಡೆದಿದೆ.

ಹೌದು, ಬಿಯರ್ ಬಾಟಲಿ ತುಂಬಿಕೊಂಡು ಪ್ರಯಾಣಿಸುತ್ತಿದ್ದ ಟ್ರಕ್ ಆಂಧ್ರಪ್ರದೇಶದ ಕಾಸಿಂಕೋಟಾ ಮಂಡಲ್ ಜಿಲ್ಲೆಯ ಬಯಾವರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಟ್ರಕ್ ಮಗುಚಿ ಬೀಳುತ್ತಲೇ ಬಿಯರ್ ಬಾಟಲಿಗಳು ರಸ್ತೆ ತುಂಬ ಚೆಲ್ಲಾ ಪಿಲ್ಲಿಯಾಗಿ ಬಿದ್ದಿವೆ. ಈ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲಿನ ಜನ ಓಡಿ ಬಂದು ಬಿಯರ್ ಬಾಟಲಿಗಳನ್ನು ಎತ್ತಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ!

ಬಿಯರ್ ಬಾಟಲಿಗಾಗಿ ನೂಕುನುಗ್ಗಲು ಉಂಟಾಗಿದ್ದು, ಆದರೆ, ಲಕ್ಷಾಂತರ ರೂಪಾಯಿ ಮೌಲ್ಯದ ಬಿಯರ್ ರಸ್ತೆಪಾಲು ಆಗಿರುವುದಕ್ಕೆ ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾದ ಟ್ರಕ್ ಚಾಲಕ ಎಷ್ಟು ಬೇಡಿಕೊಂಡರೂ ಕೇಳದೆ ಜನ ಬಿಯರ್ ಬಾಟಲಿ ಎತ್ತಿಕೊಂಡು ಹೋಗಿದ್ದು, ಬಿಯರ್ ಬಾಟಲಿ ಖಾಲಿಯಾದ ಬಳಿಕ ಬಂದವರಿಗೆ ನಿರಾಸೆಯಾಗಿದೆ ಎಂದು ತಿಳಿದು ಬಂದಿದೆ. ಅಂತು ಇಂತು ಫ್ರೀ ಆಗಿ ಬಿಯರ್ ಬಾಟಲಿ ಸಿಕ್ಕವರಿಗೆ ಬಯಸದ ಬಂದ ಭಾಗ್ಯವೆಂಬಂತೆ ಹಬ್ಬದಂತೆ ಸಂಭ್ರಮ ಪಟ್ರು..

Related posts

ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು..! ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ನಿವೇಶನ ಪಡೆದರಾ ಸಿಎಂ..?

ಮಧ್ಯಾಹ್ನ ಫುಡ್ ಆರ್ಡರ್ ಮಾಡಬೇಡಿ ಎಂದಿತಾ ‘ಜೊಮ್ಯಾಟೋ’ ಸಂಸ್ಥೆ..? ಏನಿದು ವೈರಲ್ ಪೋಸ್ಟ್..?

ಕಲ್ಮಕಾರು: ಅಯ್ಯಪ್ಪ ಮಾಲಾಧಾರಿ ಮೇಲೆ ಆನೆ ದಾಳಿ..! ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು