ಕ್ರೈಂ

2 ಬಾಲಕಿಯರ ಪತ್ತೆಗೆ ಹೊರಟ ಪೊಲೀಸರಿಗೆ ಸಿಕ್ಕಿತ್ತು7 ಮೃತದೇಹಗಳು ! ನಿಗೂಢ ಸ್ಥಳದಲ್ಲಿ ಬಯಲಾದ ರಹಸ್ಯವೇನು?

241

ನ್ಯೂಸ್ ನಾಟೌಟ್ : ಇಬ್ಬರು ಹದಿಹರೆಯದ ಹುಡುಗಿಯರು  ನಾಪತ್ತೆಯಾಗಿದ್ದ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಏಳು ಮೃತದೇಹಗಳು ಪತ್ತೆಯಾದ ಆಘಾತಕಾರಿ ಘಟನೆ ಅಮೆರಿಕಾದ ಒಕ್ಲಾಹಾಮದಿಂದ ಸೋಮವಾರ ನಡೆದಿದೆ.

ಪೊಲೀಸರು ತನಿಖೆ ಮಾಡುತ್ತ ನಿಗೂಢ ಜಾಗವೊಂದಕ್ಕೆ ತಲುಪಿದಾಗ ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು, ಈ ಏಳು ಮೃತದೇಹಗಳಲ್ಲಿ ಪೊಲೀಸರು ಹುಡುಕುತ್ತಿದ್ದ 14 ಮತ್ತು 16 ವರ್ಷ ಪ್ರಾಯದ ಇಬ್ಬರು ಬಾಲಕಿಯರ ಮೃತದೇಹಗಳು ಸೇರಿವೆಯೇ ಎಂಬುದೂ ತಿಳಿದು ಬಂದಿಲ್ಲ.

ಈ ಇಬ್ಬರು ಬಾಲಕಿಯರು ಲೈಂಗಿಕ ಅಪರಾಧ ಪ್ರಕರಣದ ಆರೋಪಿಯೊಬ್ಬನ ಜೊತೆ ಕಾಣಿಸಿಕೊಂಡಿದ್ದರೆಂದು ಹೇಳಲಾಗಿದೆ. ಏಳು ಮೃತದೇಹಗಳು ಅಮೇರಿಕಾದ ಹೆನ್ರಿಯೆಟ್ಟಾ ನಗರದಲ್ಲಿ ಪತ್ತೆಯಾದ ತಕ್ಷಣ ಶೋಧ ಕಾರ್ಯಾಚರಣೆಯನ್ನು ಪೊಲೀಸರು ನಿಲ್ಲಿಸಿದ್ದಾರೆ. ಪತ್ತೆಯಾದ ಏಳು ಮೃತದೇಹಗಳಲ್ಲಿ ನಾಪತ್ತೆಯಾದ ಬಾಲಕಿಯರ ಮೃತದೇಹಗಳೂ ಇವೆ ಎಂದು ಅಲ್ಲಿನ ಕೆಲವು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಲೈಂಗಿಕ ಅಪರಾಧಿ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾಗಿದ್ದ ಜೆಸ್ಸೆ ಎಲ್‌ ಮೆಕ್‌ಫ್ಯಾಡನ್‌ ಎಂಬಾತನಿಗೆ ಸೇರಿದ ಸ್ಥಳದಲ್ಲಿ ಮೃತದೇಹಗಳು ಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾಗಿದ್ದ ಬಾಲಕಿಯರು ಕೊನೆಯ ಬಾರಿಗೆ ಮೆಕ್‌ಫ್ಯಾಡನ್‌(39)ಗೆ ಸೇರಿದ ಬಿಳಿ ಚೆವ್ರೊಲೆಟ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.

ಸೋಮವಾರ ಆತ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು ಆದರೆ ಆತ ಹಾಜರಾಗದಿದ್ದಾಗ ಆತನ ವಿರುದ್ಧ ಬಂಧನ ವಾರಂಟ್‌ ಹೊರಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

See also  ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ವ್ಯಕ್ತಿ..! 5 ರಿಂದ 6 ಗಂಟೆಗಳ ಕಾಲ ಬೋನಿನಲ್ಲಿ ಒದ್ದಾಟ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget