ಕ್ರೈಂದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ಟ್ರಾಫಿಕ್ ಪೊಲೀಸ್ ನನ್ನು 1ಕಿ.ಮೀ ವರೆಗೆ ಕಾರಿನಲ್ಲಿ ಎಳೆದೊಯ್ದ ಕಿರಾತಕ! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಕಾರ್ ಡ್ರೈವರ್ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಅನ್ನು ತನ್ನ ವಾಹನದ ಬಾನೆಟ್ ಮೇಲೆ ಎಳೆದೊಯ್ದ ಘಟನೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದಿದೆ. ಕಾರ್ ಡ್ರೈವರ್ ಸುಮಾರು 1 ಕಿ.ಮೀ ವರೆಗೆ ಪೊಲೀಸ್ ಪೇದೆಯನ್ನು ಬಾನೆಟ್ ಮೇಲೆ ನೇತಾಡುತ್ತಿದ್ದಂತೆ ಕಾರು ಚಲಾಯಿಸಿದ್ದಾನೆ ಎಂದು ವರದಿ ತಿಳಿಸಿದೆ.

ಕಾನ್‌ಸ್ಟೆಬಲ್ ಅನ್ನು ಹರ್ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಏಪ್ರಿಲ್ 14 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರು ಚಾಲಕನನ್ನು ಮುಕಲ್ ಮೋಟು ಎನ್ನಲಾಗಿದ್ದು, ಮುಕಲ್ ಕಾರು ಚಲಾಯಿಸುತ್ತಿದ್ದಾಗ ಆತನ ಸ್ನೇಹಿತ ಮೋನು ಜೊತೆಯಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದೆ.

ಪೊಲೀಸರು ಮುಕಲ್ ಮೋಟು ವಿರುದ್ಧ ಕೊಲೆ ಯತ್ನ ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಜೊತೆಗೆ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕಾರು ಚಾಲಕನಿಗೆ ನಿಲ್ಲಿಸುವಂತೆ ಸಿಗ್ನಲ್ ನೀಡಿದರೂ ಆತ ತನ್ನ ಮೇಲೆ ಕಾರನ್ನು ಚಲಾಯಿಸಲು ಯತ್ನಿಸಿದ್ದಾನೆ ಎಂದು ಕಾನ್‌ಸ್ಟೆಬಲ್ ಹೇಳಿದ್ದಾರೆ. ಮುಕಲ್ ಮತ್ತು ಸಹಚರ ಮೋನು ವಿರುದ್ಧ ಕ್ರಿಮಿನಲ್ ದಾಖಲೆಗಳಿವೆ ಎಂದು ಸಹಾಯಕ ಪೊಲೀಸ್ ಆಯುಕ್ತ ರಮಣದೀಪ್ ಸಿಂಗ್ ಹೇಳಿದ್ದಾರೆ.

Related posts

ಅಶ್ವಿನಿ ಪುನೀತ್ ರಾಜ್​ಕುಮಾರ್ ಫೋಟೋ ಬಳಸಿ ಡೀಪ್ ಫೇಕ್ ವಿಡಿಯೋ ಹಂಚಿಕೊಂಡ ವ್ಯಕ್ತಿ..! ಫಿಲ್ಮ್ ಚೇಂಬರ್ ​ಗೆ ದೂರು ನೀಡಿದ ಅಭಿಮಾನಿಗಳು..!

ಸುಳ್ಯ: ಮನೆ ಮೇಲೆ ಒರಗಿದ ಲೋಡ್ ಲಾರಿ, ಟಿಪ್ಪರ್ ಮೇಲಕ್ಕೆತ್ತಲು ಹರಸಾಹಸ!

ಹಿಂದೂ -ಮುಸ್ಲಿಂ ಸಂಘರ್ಷದ ಕಥೆಯುಳ್ಳ ‘ಬೇರ’ ಸಿನಿಮಾದ ಟೀಸರ್ ನೋಡಿ ‘ಯಾರಿಗೆ ಯಾರನ್ನು ಕೊಲ್ಲುವ ಹಕ್ಕೂ ಇಲ್ಲ’ ಎಂದು ಕಣ್ಣೀರಿಟ್ಟ ಪ್ರವೀಣ್ ನೆಟ್ಟಾರ್ ಪತ್ನಿ