ಕರಾವಳಿಸುಳ್ಯ

ಸಂಪಾಜೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ,ಶಾಸಕಿ ಭಾಗೀರಥಿ ಮುರುಳ್ಯ ಶ್ಲಾಘನೆ

289

ನ್ಯೂಸ್ ನಾಟೌಟ್ : ಎರಡು ಬಾರಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದ ಸಂಪಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪರ್ವವನ್ನೇ ಕಾಣಬಹುದು. ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ನೇತೃತ್ವದ ಎರಡೂವರೆ ವರ್ಷದ ಆಡಳಿತ ಅವಧಿಯಲ್ಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಇದೀಗ ಪೂರ್ಣಗೊಂಡಿದೆ.ಹೀಗಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಇಂದು (ಜು.25ರಂದು) ನೆರವೇರಿತು.

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭ ಮಾತನಾಡಿದ ಅವರು “ಸಂಪಾಜೆ ಗ್ರಾಮ ಪಂಚಾಯತ್ ಮಾಡಿದ ಅಭಿವೃದ್ಧಿ ಕಾರ್ಯಗಳು ಜನ ಮೆಚ್ಚುವಂಥದ್ದಾಗಿದೆ.ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳ ಮೂಲಕ ಸಂಪಾಜೆ ಗ್ರಾಮ ರಾಜ್ಯ – ದೇಶದಲ್ಲಿ ಹೆಸರು ಗಳಿಸಲಿ ಎಂದು ಹೇಳಿದರು.ಸಂಪಾಜೆ ಗ್ರಾಮ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಪ್ರಶಸ್ತಿಯನ್ನು ಸಮಾರಂಭ ದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ‌ಜಿ.ಕೆ. ಹಮೀದ್ ರಿಗೆ ಹಸ್ತಾಂತರಿಸಿದರು.

ಈ ವೇಳೆ ಗಡಿಕಲ್ಲು ಅಂಗನವಾಡಿ ಕೇಂದ್ರವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.ನಂತರ ಕಲ್ಲುಗುಂಡಿ ಪೇಟೆಯಲ್ಲಿ ಮೀನು ಮಾರುಕಟ್ಟೆಯ ಅಧಿಕೃತ ಕಟ್ಟಡ ಉದ್ಘಾಟಿಸಿದರು.ಶುದ್ಧ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಿದ್ದು,ಬಳಿಕ ಅಂಗವಿಕಲರಿಗೆ ಸಿಂಟೆಕ್ಸ್ ಟ್ಯಾಂಕ್ ವಿತರಣೆಗೆ ಚಾಲನೆ ನೀಡಿದರು.ಅಂಗವಿಕಲರ ಮನೆಗೆ ಸೋಲಾರ್ ಅಳವಡಿಕೆ, ಪಂಚಾಯತ್ ಕಚೇರಿಯಲ್ಲಿ ಕುಡಿಯುವ ನೀರಿನ ಕೂಲರ್ ಅಳವಡಿಕೆಗೂ ಚಾಲನೆ ನೀಡಿದರು.ಈ ವೇಳೆ ಪೆಲ್ತಡ್ಕ – ಕೊಪ್ಪತ್ತಡ್ಕ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್, ಕೆಪಿಸಿಸಿ ಸೆಕ್ರೆಟರಿ ಅಬುಸಾಲಿ,ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕೆಪಿಸಿಸಿ ವಕ್ತಾರ,ತೆಕ್ಕಲ್ ಪ್ರತಿಷ್ಠಾನದ ಅಧ್ಯಕ್ಷ  ಟಿ .ಎಂ ಶಹೀದ್ , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಮಣಿಕಂಠ,ಗ್ರಾಮ ಪಂಚಾಯತ್ ಸದಸ್ಯರಾದ ಸುಂದರಿ ಮುಂಡಡ್ಕ, ಸುಮತಿ, ಜಗದೀಶ್ ರೈ, ರಜನಿ ,ಎಸ್ .ಕೆ ಹನೀಫ್,ಸೋಮಶೇಖರ, ವಿಮಲ ವಿ.ಕೊಯಿಂಗಾಜೆ , ಮೊಹಮ್ಮದ್ ಕುಂಙಿ,ಬಿ.ಎಸ್ ಯಮುನಾ ,ಕೇಶವ ಬಂಗ್ಲೆಗುಡ್ಡೆ,ವಿಜಯ ಆಲಡ್ಕ, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

See also  ತೊಡಿಕಾನ: ಮಹಿಳೆಗೆ ಕತ್ತಿಯಿಂದ ಕಡಿದು ಪರಾರಿಯಾದ ಯುವಕ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget