ವೈರಲ್ ನ್ಯೂಸ್

ನಗರದಲ್ಲಿ ರಾಜಾರೋಷವಾಗಿ ಓಡಾಡಿದ ಕಾಡಾನೆ, ಗಾಬರಿಯಿಂದ ದಿಕ್ಕುಪಾಲಾದ ಜನ! ವೈರಲ್ ವಿಡಿಯೋ

265

ನ್ಯೂಸ್ ನಾಟೌಟ್: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಗರವೊಂದರಲ್ಲಿ ರಾಜಾರೋಷವಾಗಿ ಕಾಡಾನೆಯೊಂದು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಮಾರ್ಚ್​ 9 ರಂದು ಟ್ವಿಟ್ಟರ್​​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಎರಡೇ ದಿನಗಳಲ್ಲಿ 2.6 ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ. ಊರಿಗೆ ಬಂದ ಕಾಡಾನೆಯ ವಿಡಿಯೋ ಬೀದಿ ಬದಿಯ ಕಟ್ಟಡದ ಹೊರಗೆ ಇರಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ.

https://twitter.com/Fun_Viral_Vids/status/1633827877723721729?s=20

ಪುಟ್ಟ ಬೀದಿ, ರಸ್ತೆಯ ಎರಡು ಬದಿಗಳಲ್ಲಿ ಗಾಡಿಗಳನ್ನು ಪಾರ್ಕ್​ ಮಾಡಲಾಗಿದೆ. ಜತೆಗೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅಂಗಡಿಯೊಂದರ ಮುಂದೆ ನಿಂತಿರುವುದನ್ನು ಕಾಣಬಹುದು.ಸ್ವಲ್ಪ ಸಮಯದಲ್ಲಿಯೇ ಜನರು ಗಾಬರಿಯಿಂದ ಓಡಲು ಪ್ರಾರಂಭಿಸುತ್ತಾರೆ. ಆ ಸಮಯದಲ್ಲಿಯೇ ಆನೆಯೊಂದು ಅಡ್ಡಾದಿಡ್ಡಿಯಾಗಿ ರಭಸದಲ್ಲಿ ಬಂದು ಬೀದಿಗೆ ನುಗ್ಗಿದೆ. ಜತೆಗೆ ಪಾರ್ಕ್​ ಮಾಡಲಾಗಿದ್ದ ವಾಹನಗಳಿಗೆ ಹಾನಿಗೊಳಿಸಿದೆ. ಈ ಘಟನೆ ಬೀದಿ ಬದಿಯ ಕಟ್ಟಡದ ಹೊರಗೆ ಇರಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಆನೆ ಬರುವ ವೇಗ ನೋಡಿದರೆ ಎದೆ ಝಲ್‌ಎನ್ನುತ್ತದೆ. ಹಲವು ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಈ ವಿಡಿಯೋವನ್ನು ಎರಡು ದಿನಗಳ ಹಿಂದೆ (ಮಾರ್ಚ್​ 9) ಟ್ವಿಟರ್​​ನಲ್ಲಿ ಶೇರ್ ಮಾಡಲಾಗಿದೆ. ಪೋಸ್ಟ್ ಮಾಡಿದ ಎರಡೇ ದಿನಗಳಲ್ಲಿ 2.6 ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ. 18 ಸಾವಿರ ಲೈಕ್ ಗಳು, 3060 ರೀಟ್ವಿಟ್​​ಗಳನ್ನು ಕಾಣಬಹುದು. ಜತೆಗೆ ಸಾಕಷ್ಟು ಕಾಮೆಂಟ್​​​ಗಳನ್ನು ಕಾಣಬಹುದು.

See also  ಏಷ್ಯಾ ಕಪ್ ಫೈನಲ್ : ಸಿರಾಜ್, ಹಾರ್ದಿಕ್ ಬೌಲಿಂಗ್ ಅಬ್ಬರಕ್ಕೆ ಮುಳುಗಿದ ಲಂಕಾ..! ಕೇವಲ 50 ರನ್ ಗೆ ಆಲೌಟ್ ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget