Latestಕ್ರೈಂವೈರಲ್ ನ್ಯೂಸ್ಸಿನಿಮಾ

ಅನಧಿಕೃತ ವ್ಯವಹಾರ ನಡೆಸುತ್ತಿದ್ದ ಕಂಪನಿಗೆ ಪ್ರಚಾರ ಮಾಡಿ ಕೋಟಿಗಟ್ಟಲೆ ನಗದು ಸಂಭಾವನೆ ಪಡೆದಿದ್ದ ನಟ..! ಟಾಲಿವುಡ್ ಸೂಪರ್ ಸ್ಟಾರ್ ಗೆ ED ನೋಟಿಸ್..!

698

ನ್ಯೂಸ್‌ ನಾಟೌಟ್‌: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ​ನ ಸ್ಟಾರ್ ನಟ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ಕೊಟ್ಟಿದೆ ಎನ್ನಲಾಗಿದೆ.

ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ​ನಲ್ಲಿ ತಿಳಿಸಲಾಗಿದೆ.

ಮಹೇಶ್ ಬಾಬು ಈ ಜಾಹಿರಾತು ಒಪ್ಪಂದಕ್ಕಾಗಿ 5.9 ಕೋಟಿ ರೂ.ಗಳನ್ನು ಪಡೆದಿದ್ದು, ಈ ಪೈಕಿ ಚೆಕ್ ಮೂಲಕ 3.4 ಕೋಟಿ ರೂ.ಗಳು ಮತ್ತು ನಗದು ಮೂಲಕ 2.5 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಈಗ, ನಗದು ಪಾವತಿ ಬಗ್ಗೆ ಇಡಿ ಪರಿಶೀಲನೆಗೆ ಒಳಪಟ್ಟಿದೆ.

ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಸಂಸ್ಥೆಗಳ ವಿರುದ್ಧ ಇದೀಗ ವಂಚನೆ ಆರೋಪ ಕೇಳಿಬಂದಿದ್ದು, ತೆಲಂಗಾಣ ಪೊಲೀಸರು ಭಾಗ್ಯನಗರ ಪ್ರಾಪರ್ಟೀಸ್ ಲಿಮಿಟೆಡ್‌ ನ ನರೇಂದ್ರ ಸುರಾನ ಮತ್ತು ಸಾಯಿ ಸೂರ್ಯ ಡೆವಲಪರ್ಸ್‌ನ ಸತೀಶ್ ಚಂದ್ರ ಗುಪ್ತಾ ವಿರುದ್ಧ ಎಫ್‌ ಐ ಆರ್‌ ದಾಖಲಿಸಿದ್ದಾರೆ.

ಅನಧಿಕೃತ ಲೇಔಟ್‌ ಗಳಲ್ಲಿ ಪ್ಲಾಟ್‌ ಗಳನ್ನು ಮಾರಾಟ ಮಾಡುವ ಮೂಲಕ ಮತ್ತು ಒಂದೇ ಪ್ಲಾಟ್‌ ಗಳನ್ನು ಹಲವು ಬಾರಿ ಮರುಮಾರಾಟ ಮಾಡುವ ಮೂಲಕ ಮತ್ತು ನೋಂದಣಿಗಳ ಬಗ್ಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ ಎಂಬ ಆರೋಪವಿದೆ.

ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಮಾಜಿ ಡಾನ್ ಮುತ್ತಪ್ಪ ರೈ ಎರಡನೇ ಪತ್ನಿ..! ಮನೆ ಕೆಲಸಗಾರರ ವಿಚಾರಣೆ ನಡೆಸುತ್ತಿರುವ ಪೊಲೀಸರು..!

ಮಹಿಳಾ ಶವದಿಂದ ಕಿವಿಯೋಲೆ ಕದ್ದು ಪೊಲೀಸರನ್ನು ದೂರಿದ ವಾರ್ಡ್‌ಬಾಯ್‌..! ಆರೋಪಿ ಪರಾರಿ, ವಿಡಿಯೋ ವೈರಲ್..!

See also  ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸರಗಳ್ಳತನ! ಬೆನ್ನಟ್ಟಿ ಹಿಡಿದ ಪೊಲೀಸರು!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget