ಕರಾವಳಿಪುತ್ತೂರು

ಕುಮಾರಧಾರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ; ಪೊಲೀಸರ ದಾಳಿ, ಬೋಟ್‌, ಸಹಿತ ಡ್ರೆಜ್ಜಿಂಗ್‌ ಯಂತ್ರ ವಶ

ನ್ಯೂಸ್‌ ನಾಟೌಟ್‌: ಕುಮಾರಧಾರಾ ನದಿಯಲ್ಲಿ ಡ್ರೆಜ್ಜಿಂಗ್‌ ಮೂಲಕ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿ ಸೊತ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಶುಕ್ರವಾರ (ಮೇ 5 ರಂದು) ನಡೆದಿದೆ.

ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಕಡಬ ಎಸ್‌ಐ ಹರೀಶ್‌ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಡ್ರೆಜ್ಜಿಂಗ್‌ ಬಳಸಿ ಮರಳು ತೆಗೆಯುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ ಒಂದು 4 ಎಚ್‌ಪಿ ಮೋಟಾರ್‌ ಅಳವಡಿಸಿರುವ ಡ್ರೆಜ್ಜಿಂಗ್‌ ಸಹಿತ ಬೋಟ್‌, 6 ಇಂಚು ಸುತ್ತಳತೆಯ 20 ಅಡಿ ಉದ್ದದ ಫೈಬರ್‌ ಪೈಪು, ಆರು 6 ಇಂಚು ಸುತ್ತಳತೆಯ 20 ಅಡಿ ಉದ್ದದ ಕಬ್ಬಿಣದ ಪೈಪುಗಳು, 14 ಕಬ್ಬಿಣದ ಪೈಪುಗಳಿಗೆ ಅಳವಡಿಸಿದ ಕಬ್ಬಿಣದ ಡ್ರಮ್‌ ಗಳು, ಕಬ್ಬಿಣದ ಜಾಲರಿ, 2 ಮರಳು ತೆಗೆಯಲು ಉಪಯೋಗಿಸುವ ಕಬ್ಬಿಣದ ಕೈ ಗುದ್ದಲಿಗಳು, ಬುಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಗಣಿ ಇಲಾಖೆಗೆ ಪೊಲೀಸರು ವರದಿ ಸಲ್ಲಿಸಿದ್ದಾರೆ.

Related posts

ಸುಳ್ಯದಿಂದ ನಾಪತ್ತೆಯಾದ ಮೊಬೈಲ್ ಫೋನ್ ಉತ್ತರ ಪ್ರದೇಶದಲ್ಲಿ ಪತ್ತೆ..! ಐದು ತಿಂಗಳ ನಂತರ ವ್ಯಕ್ತಿಯ ಕೈ ಸೇರಿದ ಫೋನ್..!

ಕಡಬ:ಮರಿಯಾನೆ ಸೇರಿದಂತೆ ಕಾಡಾನೆಗಳ ಹಿಂಡು ಪತ್ತೆ,ಆತಂಕದಲ್ಲಿ ಸ್ಥಳೀಯರು

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸ್ಥಾಪಕ ಟಿ.ಎಂ.ಶಹೀದ್ ಗೆ ಸದ್ಬಾವನಾ ಪ್ರಶಸ್ತಿ