ವೈರಲ್ ನ್ಯೂಸ್ಸಿನಿಮಾ

ಸಿನಿಮಾದಲ್ಲಿ ಆ್ಯಕ್ಟ್‌ ಮಾಡ್ತಾರಾ ಬಿಗ್‌ಬಾಸ್‌ 11ರ ವಿನ್ನರ್ ? ಸಾಲು ಸಾಲು ಆಫರ್ ಕುರಿತಂತೆ ಹನುಮಂತ ಹೇಳಿದ್ದೇನು?

191

ನ್ಯೂಸ್‌ ನಾಟೌಟ್‌ :ಹೆಚ್ಚಿನವರು ಲೈಫ್‌ನಲ್ಲಿ ಒಂದು ಬಾರಿ ಸಿನಿಮಾದಲ್ಲಿ ನಟಿಸೋದಕ್ಕೆ ಚಾನ್ಸ್‌ ಸಿಗ್ಲಿ ಅಂತ ಕಾದ್ರೆ , ಇಲ್ಲಿ‘ಬಿಗ್ ಬಾಸ್ 11’ರ ವಿನ್ನರ್ ಆಗಿರೋ ಹನುಮಂತ ಮಾತ್ರ ನಾನು ಸಿನಿಮಾ ಕಡೆಗೆ ಮುಖ ಮಾಡಲ್ಲ ಅಂತಿದ್ದಾರೆ. ಬಿಗ್ ಬಾಸ್‌ ವಿನ್ ಆದ ಬಳಿಕ ಇವರಿಗೆ ಸಾಲ ಸಾಲು ಆಫರ್‌ ಗಳ ಸುರಿಮಳೆ ಹರಿದು ಬರ್ತಿದೆ.ಇದೆಲ್ಲದಕ್ಕೂ ಕಾರಣವಾಗಿದ್ದು ಬಿಗ್‌ ಬಾಸ್‌.. ಹನುಮಂತ ಒಬ್ಬ ಸಿಂಗರ್‌ ಆಗಿ ನೋಡಿದವರಿಗೆ ಬಿಗ್ ಬಾಸ್ ಶೋ ಬಳಿಕ ಹನುಮಂತ ಅವರ ಸರಳತೆ ಬಗ್ಗೆ ಸಂಪೂರ್ಣ ಚಿತ್ರಣ ಸಿಕ್ಕಿತು.ಹೀಗಾಗಿ ಹನುಮಂತು ವಿನ್ ಆಗೋದಕ್ಕು ಕಾರಣವಾಯಿತು.ಇತ್ತ ಹನುಮಂತಗೆ ಬೇಡಿಕೆ ಹೆಚ್ಚಾಗಿದ್ದು, ಸಿನಿಮಾಗೆ ಮಾತ್ರ ನೋ ಎಂದಿದ್ದಾರೆ.

ಹೌದು, ಬಿಗ್ ಬಾಸ್‌ನಲ್ಲಿ ಗೆದ್ದ ಬಳಿಕ ಹನುಮಂತಗೆ ಸಿನಿಮಾ ಆಫರ್‌ಗಳು ಬರುತ್ತಿದ್ದು, ಇದೆಲ್ಲದಕ್ಕು ಹನುಮಂತ ಮಾತ್ರ ನೋ ಎಂದಿದ್ದಾರೆ. ಆದರೆ ಕಿರುತೆರೆ ಹೊರತು ಸಿನಿಮಾ ಸಹವಾಸವೇ ಬೇಡವೆಂಬ ತೀರ್ಮಾನಕ್ಕೆ ಬಂದಿದ್ದಾರೆ ಹನುಮಂತ. ಒಂದಾದ್ಮೇಲೊಂದು ರಿಯಾಲಿಟಿ ಶೋ ಮಾಡ್ತಿರುವ ಹನುಮಂತ ಟಿವಿ ಮೂಲಕ ಜನರ ಪ್ರೀತಿ ಗಳಿಸುವ ನಿಟ್ಟಿನಲ್ಲಿದ್ದಾರೆ.

ದೊಡ್ಮನೆಯಿಂದ ಹೊರ ಬಂದಾದ್ಮೇಲೆ ಮದುವೆ ಹಾಗೂ ಮನೆ ಕಟ್ಟಬೇಕು ಎಂದು ಪ್ಲ್ಯಾನ್‌ ಮಾಡಿದ್ದು,ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹೀಗಾಗಿ ಸಿನಿಮಾ ಆಫರ್‌ಗಳು ಬಂದರೂ ಸಹ ಹನುಮಂತ ನೋ ಎಂದಿದ್ದಾರೆ.ಅಂದಹಾಗೆ, ಬಿಗ್ ಬಾಸ್ ಬಳಿಕ ಅವರು ‘ಬಾಯ್ಸ್ ವರ್ಸಸ್ ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಮತ್ತೆ ಪ್ರೇಕ್ಷಕರ ಮನ ಗೆಲ್ಲಲು ಹನುಮಂತ ಸಿದ್ಧರಾಗಿದ್ದಾರೆ.

See also  ನದಿಯಲ್ಲಿ ಸ್ನಾನದ ವೇಳೆ ಮೀನೆಂದು ಮೊಸಳೆಯನ್ನು ಹಿಡಿದ ವ್ಯಕ್ತಿ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget