ಜೀವನಶೈಲಿ

ಸಿಸೇರಿಯನ್ ಹೆರಿಗೆಯ ನಂತರ ತುಂಬಾ ಎಚ್ಚರವಹಿಸಬೇಕು,ಈ ಹಣ್ಣುಗಳನ್ನು ತಿನ್ನಲೇಬಾರದು..ಯಾವುದು ಆ ಹಣ್ಣುಗಳು?

ನ್ಯೂಸ್ ನಾಟೌಟ್ :ಹೆರಿಗೆಯ ನಂತರ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ಹೆರಿಗೆಯ ಸಮಯದಲ್ಲಿ ಮತ್ತು ನಂತರ ಮಹಿಳೆಯರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಅವರ ಆಹಾರಕ್ರಮವನ್ನೂ ಒಳಗೊಂಡಿರುತ್ತದೆ.ಅದರಲ್ಲೂ ಸಿಸೇರಿಯನ್ ಹೆರಿಗೆ ಆದವರು ತುಂಬಾ ಎಚ್ಚರವಹಿಸಬೇಕು.

ಹುಳಿ ಹಣ್ಣುಗಳನ್ನು ಸೇವಿಸುವಂತಿಲ್ಲ :

ಸಿಸೇರಿಯನ್ ಹೆರಿಗೆಯ ನಂತರ, ಒಂದು ಕಡೆ ಮಹಿಳೆಯರ ದೇಹವು ಶೀಘ್ರವಾಗಿ ಚೇತರಿಸಿಕೊಳ್ಳಲು ಪೌಷ್ಟಿಕಾಂಶದ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಸಿಟ್ರಸ್ ಹಣ್ಣುಗಳನ್ನು ಆಹಾರದಲ್ಲಿ ಸೇರಿಸದಂತೆ ತಜ್ಞರು ಸಲಹೆ ನೀಡುತ್ತಾರೆ.ಹುಳಿ ಹಣ್ಣುಗಳನ್ನು ತಿನ್ನುವುದರಿಂದ ಗ್ಯಾಸ್, ಮಲಬದ್ಧತೆ ಇತ್ಯಾದಿ ಸಮಸ್ಯೆ ಹೆಚ್ಚುತ್ತದೆ. ಇದು ತಾಯಿ ಮತ್ತು ಮಗು ಇಬ್ಬರನ್ನೂ ಬಾಧಿಸುತ್ತದೆ. ಹಾಗಾಗಿ ಸಿಸೇರಿಯನ್ ಹೆರಿಗೆಯ ನಂತರ, ಮಹಿಳೆಯರು ಕಿತ್ತಳೆ, ನಿಂಬೆ, ದ್ರಾಕ್ಷಿ ಮತ್ತು ಅನಾನಸ್ ಅನ್ನು ಆಹಾರದಲ್ಲಿ ಸೇರಿಸಬಾರದು.

ಮಗುವಿಗೂ ಗ್ಯಾಸ್ಟ್ರಿಕ್ ಆಗಬಹುದು:

ಸಿಸೇರಿಯನ್ ಹೆರಿಗೆಯ ನಂತರ ಮಹಿಳೆಯರು ರಾಜ್ಮಾ, ಉದ್ದಿನಬೇಳೆ ಮತ್ತು ಬೀನ್ಸ್ ಅನ್ನು ಆಹಾರದಲ್ಲಿ ಸೇರಿಸಬಾರದು. ಇದು ತಾಯಿಯಲ್ಲಿ ಗ್ಯಾಸ್ಟ್ರಿಕ್‌ನ್ನು ಉಂಟುಮಾಡುವುದಲ್ಲದೆ, ತಾಯಿಯ ಮುಖಾಂತರ ಮಗುವಿಗೂ ಗ್ಯಾಸ್ಟ್ರಿಕ್ ಆಗುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಜಂಕ್ ಫುಡ್ ಬೇಡ:

ಹೆರಿಗೆಯ ನಂತರ ಮುಂದಿನ ಕೆಲವು ದಿನಗಳವರೆಗೆ ಮಸಾಲೆಯುಕ್ತ ಆಹಾರಗಳಿಂದ ದೂರವಿರಲು ಸಲಹೆ ನೀಡುತ್ತಾರೆ. ಅಲ್ಲದೆ ಜಂಕ್ ಫುಡ್ ಅನ್ನು ಸ್ವಲ್ಪ ಸಮಯದವರೆಗೆ ತ್ಯಜಿಸಬೇಕಾಗುತ್ತದೆ. ಜಂಕ್‌ಫುಡ್ ಸೇವಿಸುವುದರಿಂದ ಕೊಲೆಸ್ಟ್ರಾಲ್ ವೇಗವಾಗಿ ಹೆಚ್ಚಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ.

Related posts

ಹಕ್ಕಿಜ್ವರದ ಆತಂಕ, ಭಾರತದಲ್ಲಿ ಮನುಷ್ಯರಿಗೂ ಹರಡುವ ಭೀತಿ, ಏನಂದ್ರು ಆರೋಗ್ಯ ತಜ್ಞರು?

ಸಕ್ಕರೆ ಕಾಯಿಲೆಗೆ ಬೇವಿನ ಎಲೆ ಸೂಕ್ತವೇ…? ಇಲ್ಲಿದೆ ಮಾಹಿತಿ..

ರಾತ್ರಿ ಹೊತ್ತು ಪುರುಷರು ಜೀರಿಗೆ ನೀರು ಕುಡಿದ್ರೆ ಬಾರಿ ಲಾಭಗಳಿವೆಯಂತೆ, ಏನದು?ಇಲ್ಲಿದೆ ಮಾಹಿತಿ…