ಕರಾವಳಿ

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಮೇಲಿದೆ ರಾಮಭಕ್ತರ ಕಣ್ಣು..!ರಾಮಲಲ್ಲಾ ಮೂರ್ತಿಯ ದೃಷ್ಟಿ ಏರುಪೇರಾದರೆ ದೇಶಕ್ಕೇ ಅಪಾಯ..!ಇದೇನಿದು ಅಚ್ಚರಿಯ ಸಂಗತಿ?

ನ್ಯೂಸ್‌ ನಾಟೌಟ್‌: ನಾಳೆ ರಾಮಲಲ್ಲಾನ ಪ್ರತಿಷ್ಠಾಪನೆ ನಡೆಯಲಿಕ್ಕಿದೆ. ಇದೀಗ ಈ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಮಹತ್ವದ ಸಂಗತಿಯೊಂದು ಹೊರಬಿದ್ದಿದೆ.

ಹೌದು,ಬಾಲರಾಮ ಮೂರ್ತಿಗೆ ನಾಳೆ ದೃಷ್ಟಿ ಕೊಡಲಿಕ್ಕಿದೆ. ಆದರೆ ಈ ದೃಷ್ಟಿ ಕೊಡುವಾಗ ತುಂಬಾ ಜಾಗರೂಕರಾಗಿ ಕೆಲಸ ಮಾಡಬೇಕು ಎಂಬ ನಂಬಿಕೆಯಿದೆ.ಯಾಕೆಂದರೆ ಒಂದು ವೇಳೆ ದೃಷ್ಟಿ ಕೆಳಕ್ಕೆ ಇಳಿದರೆ ಶಿಲ್ಪಿ ಹಾಗೂ ಅವರ ಕುಟುಂಬಕ್ಕೆ ಅಪಾಯವಿದೆ. ರಾಮಲಲ್ಲಾ ಮೂರ್ತಿಯ ಕಣ್ಣು ಮೇಲೆ ಹೋದರೆ ದೇಶಕ್ಕೆ ಕೆಡುಕಾಗಲಿದೆ ಎಂದು ಬಾಲರಾಮ ಮೂರ್ತಿ  ಶಿಲ್ಪಿ ಅರುಣ್ ಯೋಗಿರಾಜ್ ಮಾವ ಪ್ರೊ.ಲಕ್ಷ್ಮಿ ನಾರಾಯಣ್ ಹೇಳಿದ್ದಾರೆ.

ಮೂರ್ತಿಯ ಕಣ್ಣುಗಳಲ್ಲಿ ಯಾವುದೇ ವ್ಯತ್ಯಾಸವಾಗಕೂಡದು. ನೇರವಾಗಿಯೇ ಇರಬೇಕು. ಇದಲ್ಲದೆ, ಬಾಲರಾಮನ ಫೋಟೋ ವೈರಲ್ ಆಗಿದ್ದು ಕುಟುಂಬದವರಿಗೂ ಆತಂಕವಿದೆ‌. ಫೋಟೋ ಬಿಡುಗಡೆ ಕುರಿತು ಆತಂಕ ಮಿಶ್ರಿತ ಭಯ ಇದೆ. ಆ ಫೋಟೋವನ್ನ ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಬೇಕಿತ್ತು. ಅದಕ್ಕೆ ಮೊದಲೇ ಬಿಡುಗಡೆ ಆಗಿದ್ದು ಬೇಸರ ಅಂತಿದ್ದಾರೆ. ಇನ್ನು ಬಾಲರಾಮನ ಫೋಟೋ ಅದ್ಭುತವಾಗಿ ಮೂಡಿಬಂದಿದೆ. ಮೂರ್ತಿಯ ಕಣ್ಣು ಈವರೆಗೆ ತೆರೆದಿಲ್ಲ. ಇಡೀ ಜಗತ್ತು ಆ ಫೋಟೋ ಕಂಡು ಧನ್ಯರಾಗಿದ್ದಾರೆ ಎಂದಿದ್ದಾರೆ.

Related posts

ದಕ್ಷಿಣ ಕನ್ನಡ, ಕೊಡಗಿಗೆ ಭಾರಿ ಮಳೆ ಅಪ್ಪಳಿಸುವ ಸಾಧ್ಯತೆ

ಸುಳ್ಯ ಹಬ್ಬ ಸಮಿತಿ ಅಧ್ಯಕ್ಷರಾಗಿ ಪಿ.ಸಿ ಜಯರಾಮ ಪುನರಾಯ್ಕೆ

ಪುತ್ತೂರು:ಭೀಕರ ರಸ್ತೆ ಅಪಘಾತ, ಪಾದಚಾರಿ ಮೃತ್ಯು,ಉಬರಡ್ಕ ನಿವಾಸಿ ಬೈಕ್ ಸವಾರ ಗಂಭೀರ