ನ್ಯೂಸ್ ನಾಟೌಟ್ : ಗರ್ಭಿಣಿಯರಿಗೆ ಪರೀಕ್ಷೆ ಮಾಡುವಾಗ ಸಾಮಾನ್ಯವಾಗಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಲಾಗುತ್ತದೆ. ಹೊಟ್ಟೆಗೆ ಜೆಲ್ ಹಚ್ಚಿ ನಂತರ ವೈದ್ಯರು ಪರೀಕ್ಷೆ ಮಾಡುತ್ತಾರೆ. ಪರದೆಯ ಮೇಲೆ ಮಗುವಿನ ಚಲನ ವಲನಗಳನ್ನು ನೋಡುತ್ತಾ ರಿಪೋರ್ಟ್ ಕೈಗೆ ನೀಡುತ್ತಾರೆ.ಇದರಿಂದ ಮಗುವಿನ ಬೆಳವಣಿಗೆ ಬಗ್ಗೆ ಗೊತ್ತಾಗುತ್ತದೆ. ಆದರೆ ಅಪ್ಪಿ ತಪ್ಪಿ MRI ಮಾಡಿದ್ರೆ ಗಾಬರಿ ಬೀಳೋದು ಗ್ಯಾರಂಟಿ..!
ಹೌದು, MRI ಪರೀಕ್ಷೆಯಿಂದಲೂ ಮಗುವಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.ಆದರೆ ಎಂಆರ್ಐನಲ್ಲಿ ನೀವು ಹೊಟ್ಟೆಯಲ್ಲಿರುವ ಮಗುವನ್ನು ನೋಡಿಬಿಟ್ಟರೆ, ಹೌಹಾರಿ, ಕಂಗಾಲಾಗಿ, ಬೆದರಿ ಹೋಗುವಿರಿ ಎನ್ನುತ್ತಾರೆ ವೈದ್ಯರು.ಎಂಆರ್ಐ ಮೂಲಕ ನೋಡಿದರೆ ಮಗು ಏಲಿಯನ್ ರೀತಿ ಕಾಣಿಸುತ್ತದೆ ಎನ್ನುವುದು ಈ ಫೋಟೋಗಳನ್ನು ನೋಡಿದರೆ ತಿಳಿದುಕೊಳ್ಳಬಹುದಾಗಿದೆ. ಹಾಲಿವುಡ್ ವೈಜ್ಞಾನಿಕ ಕಾದಂಬರಿ ಬ್ಲಾಕ್‌ಬಸ್ಟರ್‌ನಿಂದ ಬಂದ ಅನ್ಯಗ್ರಹ ಜೀವಿಗಳು ಎಂದು ನೀವು ಭಾವಿಸುತ್ತೀರಿ ಎನ್ನುತ್ತಾರೆ ವೈದ್ಯರು. ಇದನ್ನು ನೋಡಿದರೆ ಗರ್ಭಿಣಿಯರು ಅಲ್ಲಿಯೇ ಮೂರ್ಛೆ ತಪ್ಪಲೂಬಹುದು ಎನ್ನಲಾಗಿದೆ. ಇದೇ ಕಾರಣಕ್ಕೆ ಗರ್ಭಿಣಿಯರಿಗೆ ಅವರ ಗರ್ಭಧಾರಣೆಯ ಉದ್ದಕ್ಕೂ ನಿಯಮಿತವಾಗಿ MRI ನೀಡಲಾಗುವುದಿಲ್ಲ.
ಸಾಮಾನ್ಯವಾಗಿ ಮಗುವಿನ ಬೆಳವಣಿಗೆ ಬಗ್ಗೆ ಸಂದೇಹಗಳು ಇದ್ದ ಸಂದರ್ಭದಲ್ಲಿ ವೈದ್ಯರು ಎಂಆರ್ಐ ಮೊರೆ ಹೋಗುವುದು ಇದೆ. ಉದಾಹರಣೆಗೆ, ಭ್ರೂಣದ ಕುತ್ತಿಗೆ, ಎದೆಗೂಡು, ಹೊಟ್ಟೆ ಮತ್ತು ಬೆನ್ನುಮೂಳೆಯ ವಿರೂಪಗಳನ್ನು ವ್ಯಾಖ್ಯಾನಿಸಲು ಮತ್ತು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ. ಆದರೆ, ಇದನ್ನು ಭಾವಿ ಅಮ್ಮನಿಗೆ ಮಾತ್ರ ತೋರಿಸುವುದಿಲ್ಲ ಎನ್ನಲಾಗಿದೆ.
View this post on Instagram