ಕರಾವಳಿ

ತುಳು ಚಿತ್ರದಲ್ಲಿ ನಾನು ನಟಿಸಲು ಸಿದ್ಧ- ಅನಂತ್ ನಾಗ್ ,ತುಳು ಭಾಷೆ ಬಗ್ಗೆ ಹಿರಿಯ ನಟ ಹೇಳಿದ್ದೇನು?

150

ನ್ಯೂಸ್ ನಾಟೌಟ್ : ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್‌ನಾಗ್ ಅವರು ಅವಕಾಶ ಸಿಕ್ಕರೆ ತುಳು ಭಾಷೆಯಲ್ಲಿ ಅಭಿನಯಿಸುತ್ತೇನೆ ಎಂದು ಹೇಳಿದ್ದಾರೆ.ಇದೀಗ ಹೇಳಿಕೆ ಬಾರಿ ಸದ್ದು ಮಾಡ್ತಿದೆ. ಕನ್ನಡದ ಮೇರು ನಟ ಅನಂತ್ ನಾಗ್ ಅವರು ತುಳುವಿನಲ್ಲಿ ಅಭಿನಯಿಸುತ್ತೇನೆ ಎಂದು ಅಭಿಮಾನದಿಂದ ಹೇಳಿದ್ದು ಸಹಜವಾಗಿಯೇ ತುಳು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಮಂಗಳೂರಿನ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಭಾನುವಾರ (ಸೆ.3) ನಡೆದಂತಹ ಮಂಗಳೂರಿನ ಅನಂತನಾಗ್-75 ಅಭಿನಂದನಾ ಸಮಿತಿ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರು ಈ ಹೇಳಿಕೆ ನೀಡಿದ್ದಾರೆ.

ನನ್ನ ಕರ್ಮಭೂಮಿ ಕರ್ನಾಟಕ ಕರಾವಳಿ.ಕರಾವಳಿಯ ಸೊಗಡು ಆಗಿರುವ ತುಳು ಭಾಷೆಯಲ್ಲಿ (Tulu Language) ಅವಕಾಶ ಸಿಕ್ಕಿದರೆ ಪೂರ್ಣ ಪ್ರಮಾಣದಲ್ಲಿ ನಾನು ನಟಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಂವಾದದಲ್ಲಿ ಈ ಕುರಿತು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ನೀಡುತ್ತಾ, ಅನಂತನಾಗ್, ಆಳವಾದ ಪಾತ್ರವಿದ್ದರೆ, ಅನುಭವ ಉತ್ತಮವಾಗಿರುತ್ತದೆ. ಅನುಭವಕ್ಕೆ ತಕ್ಕಂತೆ ನಟನೆಗೆ ನಾನು ಯಾವತ್ತೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.ತಮ್ಮ ಸಹಜ ಅಭಿನಯದ ಮೂಲಕ ಮನೆ ಮಾತಾಗಿರುವ ನಟ ಅನಂತ್ ನಾಗ್ ಅವರ ಮುಂಬರುವ ಸಿನಿಮಾಗಳಿಗೆ ಫ್ಯಾನ್ಸ್ ಕಾಯ್ತಿದ್ದಾರೆ.

See also  ಮಾಜಿ ಸಿಎಂ ಸದಾನಂದ ಗೌಡರ ಮಧ್ಯಸ್ಥಿಕೆ, ಕೊನೆಗೂ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘಗಳ ಮುನಿಸು ಅಂತ್ಯ..!
  Ad Widget   Ad Widget     Ad Widget   Ad Widget   Ad Widget   Ad Widget