Latestಕ್ರೈಂವೈರಲ್ ನ್ಯೂಸ್

ICU ನಲ್ಲಿ ಮಹಿಳಾ ರೋಗಿಯ ಮೇಲೆ ಸಿಬ್ಬಂದಿಯಿಂಲೇ ಅತ್ಯಾಚಾರ..! ದೂರು ದಾಖಲಿಸಿದ ಪತಿ..!

754

ನ್ಯೂಸ್ ನಾಟೌಟ್: ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಮೇಲೆ ಆಸ್ಪತ್ರೆ ಸಿಬ್ಬಂದಿಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆಯೊಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ರಾಜಸ್ಥಾನದ ಅಲ್ವಾರ್ ನಲ್ಲಿರುವ ಇಎಸ್ ಐಸಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯ ಪತಿ ನೀಡಿದ ದೂರಿನಲ್ಲಿ “ಜೂನ್ 2 ರಂದು ತನ್ನ ಪತ್ನಿಯನ್ನು ಟ್ಯೂಬ್ ಆಪರೇಷನ್‌ ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 3 ರಂದು ಆಪರೇಷನ್ ನಡೆಸಲಾಗಿತ್ತು.

ಇದಾದ ಬಳಿಕ ಜೂನ್ 4 ರಂದು ಮಹಿಳೆಯನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಈ ವೇಳೆ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ನನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದು ಜೂನ್ 5 ರಂದು ಪತ್ನಿಗೆ ಪ್ರಜ್ಞೆ ಬಂದ ಬಳಿಕ ನಡೆದ ವಿಚಾರವನ್ನು ತನ್ನ ಬಳಿ ತಿಳಿಸಿದ್ದಾಳೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಘಟನೆ ಸಂಬಂಧ ಹೇಳಿಕೆ ನೀಡಿದ ಇಎಸ್ ಐಸಿ ವೈದ್ಯಕೀಯ ಕಾಲೇಜಿನ ಡೀನ್ ಅಸಿಮ್ ದಾಸ್. ಮಹಿಳೆಯೊಬ್ಬರ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ಅತ್ಯಾಚಾರ ಎಸಗಿರುವ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಇದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ತನಿಖೆಗೆ ನಾವು ಸಹಕಾರ ನೀಡುತ್ತೇವೆ ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ಹೇಳಿದ್ದಾರೆ.

ಜೂ.8ರಿಂದ ರಾಜ್ಯದಲ್ಲಿ ಮತ್ತೆ ಮಳೆ..! 11 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ..!

See also  ವಿಶ್ವಕಪ್ ಪಂದ್ಯದ ವೇಳೆ ಭಾರತದ ರಾಷ್ಟ್ರ ಧ‍್ವಜಕ್ಕೆ ಅವಮಾನಿಸಿದ ಅಧಿಕಾರಿ! ಚೆನ್ನೈ ಪೊಲೀಸ್ ಅಧಿಕಾರಿ ರಾಷ್ಟ್ರ ಧ್ವಜಗಳನ್ನು ಕಸದ ಡಬ್ಬಿಗೆ ಹಾಕಿದ್ದೇಕೆ? ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget